ಪಠಾಣ್ ಕೋಟ್ ಗೆ ಹೊರಟ ಪಾಕ್ ತಂಡ: ಅಧಿಕಾರಿಗಳ ಭೇಟಿಗೆ ಆಪ್, ಕಾಂಗ್ರೆಸ್ ವಿರೋಧ
ನವದೆಹಲಿ, ಪಠಾಣ್ ಕೋಟ್: ಉಗ್ರಗಾಮಿಗಳ ದಾಳಿ ನಡೆದು ಏಳು ಮಂದಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದ ಪಠಾಣ್ ಕೋಟ್ ವಾಯುನೆಲೆಗೆ ಆಂತರಿಕ ಗುಪ್ತಚರ ಸೇವೆಯ(ಐಎಸ್ಐ) ಅಧಿಕಾರಿಗಳನ್ನೊಳಗೊಂಡ ತಂಡ ಪಾಕಿಸ್ತಾನದ ಅಮೃತಸರದಿಂದ ಬುಲ್ಲೆಟ್ ಸುರಕ್ಷಿತ ಕಾರಿನಲ್ಲಿ ಹೊರಟಿದೆ.
ಈ ಭೇಟಿಯನ್ನು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಖಂಡಿಸಿದ್ದು, ಪಾಕ್ ಅಧಿಕಾರಿಗಳ ಭೇಟಿಗೆ ತಡೆಯೊಡ್ಡುವುದಾಗಿ ಆಮ್ ಆದ್ಮಿ ಪಕ್ಷದ ಸಚಿವರು ಬೆದರಿಕೆಯೊಡ್ಡಿದ್ದಾರೆ.
ಕಳೆದ ಜನವರಿ 2ರಂದು ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರಗಾಮಿಗಳು ಮತ್ತು ಭದ್ರತಾ ಪಡೆ ಗುಂಡಿನ ಚಕಮಕಿಯಲ್ಲಿ ನಿರತರಾಗಿದ್ದ ಪ್ರದೇಶದಲ್ಲಿ ಪಾಕಿಸ್ತಾನ ತಂಡ ತಪಾಸಣೆ ನಡೆಸಲಿದೆ. ವಾಯುನೆಲೆಯ ಸೂಕ್ಷ್ಮ ಪ್ರದೇಶಗಳಿಗೆ ತಂಡ ಹೋಗದಂತೆ ತಡೆಹಿಡಿಯುವುದಾಗಿ ನಿನ್ನೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದರು. ಉಗ್ರರು ಯಾವ ದಾರಿಯಾಗಿ ಬಂದಿರಬಹುದು ಎಂದು ಪಾಕಿಸ್ತಾನ ತಂಡ ತಪಾಸಣೆ ನಡೆಸಲಿದೆ. ಉಗ್ರಗಾಮಿಗಳ ಶವಗಳನ್ನು ಇಟ್ಟಿರುವ ಸ್ಥಳಕ್ಕೂ ಕೂಡ ಪಾಕಿಸ್ತಾನ ಅಧಿಕಾರಿಗಳ ತಂಡ ಹೋಗುವ ಸಾಧ್ಯತೆಯಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ