ಆರ್ ಎಸ್ ಎಸ್ ನಿಯತಕಾಲಿಕೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಾಂಗ್ರೆಸ್ ಮುಖಂಡನ ಲೇಖನ!

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಪಕ್ಷದ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಆರ್ ಎಸ್ ಎಸ್ ನಿಯತಕಾಲಿಕೆ ಅರ್ಗನೈಜರ್ ನಲ್ಲಿ ವಾಕ್ ಸ್ವಾತಂತ್ರ್ಯದ ಬಗ್ಗೆ ಲೇಖನ ಬರೆದಿದ್ದಾರೆ.
ಅಭಿಷೇಕ್ ಮನು ಸಿಂಘ್ವಿ
ಅಭಿಷೇಕ್ ಮನು ಸಿಂಘ್ವಿ

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಪಕ್ಷದ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಆರ್ ಎಸ್ ಎಸ್ ನಿಯತಕಾಲಿಕೆ ಅರ್ಗನೈಜರ್ ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಲೇಖನ ಬರೆದಿದ್ದಾರೆ.
ಲೇಖನದಲ್ಲಿ ವಾಕ್ ಸ್ವಾತಂತ್ರ್ಯದ ಪರ ನಿಲುವು ಪ್ರಕಟಿಸಿರುವ ಅಭಿಷೇಕ್ ಮನು ಸಿಂಘ್ವಿ, ದೇಶದ್ರೋಹ ಕಾನೂನನ್ನು ಮಿತಿ ಮೀರಿ ಬಳಕೆ ಮಾಡಿಕೊಳ್ಳಲಾಗುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಇತ್ತೀಚೆಗೆ ಅಸಾವುದ್ದೀನ್ ಒವೈಸಿ ನೀಡಿದ್ದ ಹೇಳಿಕೆಯನ್ನು ಖಂಡಿಸಿರುವ ಸಿಂಘ್ವಿ, ಅಸಾವುದ್ದೀನ್ ಒವೈಸಿ ಹೇಳಿಕೆಗಳನ್ನು ದೇಶದ್ಹದ ಆರೋಪದಡಿ ಸೇರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 
ನಾನು ಕನ್ಹಯ್ಯ ಕುಮಾರ್, ಅಸಾವುದ್ದೀನ್ ಒವೈಸಿ ಮಾತನಾಡಿದಂತೆ ಮಾತನಾಡಲು ಇಷ್ಟಪಡುವುದಿಲ್ಲ. ಅವರ ಕೆಲವು ಹೇಳಿಕೆಗಳು ಖಂಡನಾರ್ಹವಾಗಿದ್ದರೂ ಅದನ್ನು ರಾಷ್ಟ್ರದ್ರೋಹ ಎಂದು ಹೇಳಲು ಸಾಧ್ಯವಿಲ್ಲ, ಇಂತಹ ಮನಸ್ಥಿತಿಯೇ ನಮಗೂ ಪಾಕಿಸ್ತಾನಕ್ಕೂ ಇರುವ ವ್ಯತ್ಯಾಸವನ್ನು ತಿಳಿಸುತ್ತದೆ ಎಂದು ಸಿಂಘ್ವಿ  ಅರ್ಗನೈಜರ್ ಗೆ ಬರೆದಿರುವ ಲೇಖನದಲ್ಲಿ ತಿಳಿಸಿದ್ದಾರೆ.  ಕಾಂಗ್ರೆಸ್ ಮುಖಂಡನಾಗಿದ್ದು ಆರ್ ಎಸ್ ಎಸ್ ನ ನಿಯತಕಾಲಿಕೆಗೆ ಲೇಖನ ಬರೆದಿರುವುದನ್ನು ಸಮರ್ಥಿಸಿಕೊಂಡಿರುವ ಸಿಂಘ್ವಿ, ಇದೂ ಸಹ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com