ಕೇರಳದಲ್ಲಿ ದ್ವಿಚಕ್ರ ವಾಹನ ಖರೀದಿಸಿದವರಿಗೆ ಹೆಲ್ಮೆಟ್ ಮತ್ತು ಇತರ ಉಪಕರಣಗಳು ಉಚಿತ

ಇದೇ ಏಪ್ರಿಲ್‌ 1ರಿಂದ ಹೊಸ ದ್ವಿಚಕ್ರ ವಾಹನ ಖರೀದಿಸುವವರಿಗೆ ಐಎಸ್‌ಐ ಮುದ್ರೆ ಇರುವ ಹೆಲ್ಮೆಟ್‌ ಉಚಿತವಾಗಿ ನೀಡುವ ಕ್ರಮ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ತಿರುವನಂತಪುರ: ಕರ್ನಾಟಕದಲ್ಲಿ ದ್ವಿಚಕ್ರ ವಾಹನ ಓಡಿಸುವವರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ನ್ನು ಕಡ್ಡಾಯವಾಗಿ ಧರಿಸಬೇಕೆಂಬ ನಿಯಮವಿದೆ. ಹೆಲ್ಮೆಟ್ ಬೇಕೆನ್ನುವವರು ಹಣ ಕೊಟ್ಟು ಖರೀದಿಸಬೇಕು.

ಆದರೆ ಕೇರಳ ರಾಜ್ಯದಲ್ಲಿ ಇನ್ನು ಮುಂದೆ ದ್ವಿಚಕ್ರ ವಾಹನ ಕೊಂಡುಕೊಂಡರೆ ಹೆಲ್ಮೆಟ್ ಉಚಿತವಾಗಿ ಕೊಡುತ್ತಾರೆ. ಇದೇ ಏಪ್ರಿಲ್‌ 1ರಿಂದ ಹೊಸ ದ್ವಿಚಕ್ರ ವಾಹನ ಖರೀದಿಸುವವರಿಗೆ ಐಎಸ್‌ಐ ಮುದ್ರೆ ಇರುವ ಹೆಲ್ಮೆಟ್‌ ಉಚಿತವಾಗಿ ನೀಡುವ ಕ್ರಮ ಕಡ್ಡಾಯವಾಗಿ ಜಾರಿಗೆ ಬರಲಿದೆ.

ಕೇವಲ ಹೆಲ್ಮೆಟ್‌ ಮಾತ್ರವಲ್ಲದೆ ಹೊಸ ದ್ವಿಚಕ್ರ ವಾಹನದೊಂದಿಗೆ ಮುಂಬದಿಯ ಮತ್ತು ಹಿಂಬದಿಯ ನಂಬರ್‌ ಪ್ಲೇಟ್‌, ಸೈಡ್‌ ಮಿರರ್‌, ಸಾರಿ ಗಾರ್ಡ್‌, ಕ್ರ್ಯಾಶ್‌ ಗಾರ್ಡ್‌ ಮತ್ತು ಹಿಂಬದಿ ಸವಾರರಿಗೆ ಹ್ಯಾಂಡಲ್‌ ಗ್ರಿಪ್‌ ಕೂಡ ಉಚಿತವಾಗಿ ಸಿಗಲಿದೆ ಎನ್ನುತ್ತಾರೆ ಕೇರಳ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ತೋಮಿನ್ ಜೆ ತಚಂಕರಿ.

ಈ ಕುರಿತ ನಿರ್ಧಾರವನ್ನು ನಿನ್ನೆ ನಡೆದ ಮೋಟಾರ್‌ ಸೈಕಲ್‌ ಉತ್ಪಾದಕರ ಸಭೆಯಲ್ಲಿ ಸರ್ವಾನುಮತದಿಂದ ಕೈಗೊಳ್ಳಲಾಯಿತು. ಹೆಲ್ಮೆಟ್‌ ಸಹಿತವಾಗಿ ಈ ಯಾವುದೇ ಬಗೆಯ ಹೆಚ್ಚುವರಿ ಸಲಕರಣೆಗಳಿಗೆ ದರವನ್ನು ಗ್ರಾಹಕರ ಮೇಲೆ ವಿಧಿಸಬಾರದೆಂದು ವಾಹನ ಉತ್ಪಾದಕರಿಗೆ ಆದೇಶಿಸಲಾಗಿದೆ; ಒಂದೊಮೆ ಈ ನಿಯಮ ಉಲ್ಲಂಘಿಸಿದರೆ  ಕೇರಳ ರಾಜ್ಯದಲ್ಲಿನ ಅವರ ಕಾರ್ಯನಿರ್ವಹಣೆಯ ಹಕ್ಕು ರದ್ದಾಗಲಿದೆ ಎಂಬ ಎಚ್ಚರಿಕೆಯನ್ನು ಇಲಾಖೆ ನೀಡಿದೆ.

ಕೇರಳದಲ್ಲಿ ದ್ವಿಚಕ್ರ ವಾಹನಗಳ ಅಪಘಾತ ಭಾರೀ ಸಂಖ್ಯೆಯಲ್ಲಿ ಏರುತ್ತಿರುವುದೇ ಉಚಿತ ಹೆಲ್ಮೆಟ್‌ ಮತ್ತು ಉಚಿತ ಬಿಡಿಭಾಗಗಳ ಪೂರೈಕೆಗೆ ಕಾರಣವಾಗಿದೆ. ಕಳೆದ ವರ್ಷ ಕೇರಳದಲ್ಲಿ 20 ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನ ಅಪಘಾತಗಳು ಸಂಭವಿಸಿದ್ದು, ಈ ಪೈಕಿ 3 ಸಾವಿರದ 762 ಅಪಘಾತಗಳು ರಾಜ್ಯದ ರಾಜಧಾನಿ ತಿರುವನಂತಪುರದಲ್ಲಿ ಘಟಿಸಿವೆ ಎಂದು ರಾಜ್ಯದ ಅಪರಾಧ ದಾಖಲೆಗಳ ವಿಭಾಗ ತಿಳಿಸಿದೆ.
 ವಾಹನ ತಯಾರಿಕ ಕಂಪೆನಿಗಳು ಗ್ರಾಹಕರ ಮೇಲೆ ವಿಮಾ ಸಂಸ್ಥೆಗಳನ್ನು ಆಯ್ಕೆ ಮಾಡಲು ಒತ್ತಾಯಿಸಬಾರದು. ವಾಹನದ ಮಾಲೀಕರೆ ಅವರ ಇಷ್ಟದ ವಿಮಾ ಪೂರೈಕೆದಾರರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಬೇಕೆಂದು ಇಲಾಖೆ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com