ಜಲ್ಲಿಕಟ್ಟು ಕ್ರೀಡೆಗೆ ವಿರೋಧ: ಪ್ರಾಣಿ ದಯಾ ಮಂಡಳಿಗೆ ಕೇಂದ್ರ ಸರ್ಕಾರ ನೊಟೀಸು

ಪೊಂಗಲ್ ಸಂದರ್ಭದಲ್ಲಿ ಜಲ್ಲಿಕಟ್ಟು ಪಂದ್ಯ ಆಡುವುದಕ್ಕೆ ಅವಕಾಶ ನೀಡಿ ಜನವರಿ 7ರಂದು ನೀಡಿದ್ದ ಆದೇಶಕ್ಕೆ...
ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ
ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ

ನವದೆಹಲಿ: ಪೊಂಗಲ್ ಸಂದರ್ಭದಲ್ಲಿ ಜಲ್ಲಿಕಟ್ಟು ಪಂದ್ಯ ಆಡುವುದಕ್ಕೆ ಅವಕಾಶ ನೀಡಿ ಜನವರಿ 7ರಂದು ನೀಡಿದ್ದ ಆದೇಶಕ್ಕೆ ವಿರುದ್ಧವಾಗಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ  ಭಾರತೀಯ ಪ್ರಾಣಿ ದಯಾ ಮಂಡಳಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಷೋಕಾಸು ನೊಟೀಸು ಕಳುಹಿಸಿದೆ.

ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರಿ ಆದೇಶ ನೀಡಿದ ಮೂರು ತಿಂಗಳ ನಂತರ ಪ್ರಾಣಿ ದಯಾ ಮಂಡಳಿ ಅಧ್ಯಕ್ಷ ಮೇಜರ್ ಜನರಲ್(ನಿವೃತ್ತ) ಆರ್. ಎಂ. ಅವರಿಗೆ ಮೊನ್ನೆ ಸೋಮವಾರ ಷೋಕಾಸು ನೊಟೀಸನ್ನು ಕೇಂದ್ರ ಸಚಿವಾಲಯ ಕಳುಹಿಸಿದೆ. ಸಚಿವಾಲಯದಿಂದ ಮೊದಲೇ ಪೂರ್ವಾನುಮತಿ ತೆಗೆದುಕೊಳ್ಳದೆ ಯಾವುದೇ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಅಧಿಕಾರ ಪ್ರಾಣಿ ದಯಾ ಮಂಡಳಿಗೆ ಇಲ್ಲ ಎಂದು ಸಚಿವಾಲಯ ಹೇಳಿದೆ.

ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಪಟ್ಟಂತೆ ಹೊರಡಿಸಲಾದ ಅಧಿಸೂಚನೆಗೆ ವಿರುದ್ಧವಾಗಿ ಭಾರತೀಯ ಪ್ರಾಣಿ ದಯಾ ಮಂಡಳಿ ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಆದರೆ ಕೇಂದ್ರ ಪರಿಸರ ಸಚಿವಾಲಯದ ಪೂರ್ವಾನುಮತಿ ಇಲ್ಲದೆ ಯಾವುದೇ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಹಾಗಾಗಿ ಮಂಡಳಿ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಸಚಿವಾಲಯ ನ್ಯಾಯಾಲಯವನ್ನು ಕೇಳಿದೆ.

ಆದರೆ ಸಚಿವಾಲಯದ ಷೋಕಾಸು ನೊಟೀಸ್ ಗೆ ಪ್ರತಿಕ್ರಿಯೆ ನೀಡಿರುವ ಮಂಡಳಿ, ರಾಜಕೀಯ ಪ್ರೇರಿತ ಎಂದು ಆರೋಪಿಸಿದೆ. '' ಇದರ ಹಿಂದೆ ರಾಜಕೀಯ ಉದ್ದೇಶವಿದೆ. ತಮಿಳುನಾಡಿನಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿರುವುದರಿಂದ ಬಿಜೆಪಿ ಈ ರೀತಿ ನೊಟೀಸು ಕಳುಹಿಸಿದೆ. ಎಂದು ಪ್ರಾಣಿ ದಯಾ ಮಂಡಳಿಗೆ ಸದಸ್ಯರಲ್ಲೊಬ್ಬರಾದ ಎನ್.ಜಿ.ಜಯಸಿಂಹ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com