ಪಠಾಣ್ ಕೋಟ್ ದಾಳಿ ತನಿಖೆಗೆ ಆಗಮಿಸಿರುವ ಪಾಕ್ ತಂಡ ತಾಜ್ ಮಹಲ್, ಅಜ್ಮೆರ್ ದರ್ಗಾ ನೋಡಬೇಕಂತೆ

ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರ ದಾಳಿ ಪ್ರಕರಣದ ತನಿಖೆಗಾಗಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ತಂಡ...
ಪಾಕ್ ತನಿಖಾ ತಂಡ
ಪಾಕ್ ತನಿಖಾ ತಂಡ
ನವದೆಹಲಿ: ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರ ದಾಳಿ ಪ್ರಕರಣದ ತನಿಖೆಗಾಗಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ತಂಡ ಆಗ್ರದ ತಾಜ್ ಮಹಲ್ ಹಾಗೂ ಅಜ್ಮೆರ್ ದರ್ಗಾಕ್ಕೆ ಭೇಟಿ ನೀಡಲು ಬಯಸಿದೆಯಂತೆ.
ಎಬಿಪಿ ನ್ಯೂಸ್ ಪ್ರಕಾರ, ತಾಜ್ ಮಹಲ್ ಹಾಗೂ ಅಜ್ಮೆರ್ ಭೇಟಿ ನೀಡುವುದಕ್ಕಾಗಿ ತಮ್ಮ ವೀಸಾ ಅವಧಿಯನ್ನು ವಿಸ್ತರಿಸುವಂತೆ ಪಾಕ್ ತನಿಖಾ ತಂಡ ಭಾರತ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ ಭದ್ರತೆಯ ದೃಷ್ಟಿಯಿಂದ ಪಾಕ್ ತನಿಖಾ ತಂಡದ ಬೇಡಿಕೆಯನ್ನು ಭಾರತ ಈಡೇರಿಸುವುದು ಅನುಮಾನ ಎನ್ನಲಾಗಿದೆ.
ಪಠಾಣ್ ಕೋಟ್ ಉಗ್ರ ದಾಳಿಯ ತನಿಖೆಗಾಗಿ ಕಳೆದ ಭಾನುವಾರ ದೆಹಲಿಗೆ ಆಗಮಿಸಿರುವ ಐವರು ಸದಸ್ಯರನ್ನೊಳಗೊಂಡ ಪಾಕ್ ಜಂಟಿ ತನಿಖಾ ತಂಡ ಏಪ್ರಿಲ್ ಎರಡರಂದು ಇಸ್ಲಾಮಾಬಾದ್ ಗೆ ಮರಳಬೇಕಿದೆ.
ಪ್ರತಿಪಕ್ಷಗಳ ತೀವ್ರ ವಿರೋಧ ಹಾಗೂ ಪ್ರತಿಭಟನೆಯ ನಡುವೆಯೇ ಪಾಕ್ ತನಿಖಾ ತಂಡ ಮಾರ್ಚ್ 29ರಂದು ಪಠಾಣ್ ಕೋಟ್ ವಾಯುನೆಲೆಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com