ಎಲ್ಲಾ ಚುನಾವಣೆಗಳನ್ನು ಒಟ್ಟಿಗೆ ನಡೆಸಿ, ಹಣ ಸಮಯ ಉಳಿಸಲು ಮೋದಿ ಕರೆ

ಎಲ್ಲಾ ಚುನಾವಣೆಗಳನ್ನು ಒಟ್ಟೊಟ್ಟಿಗೆ ನಡೆಸಿ ಹಣ ಸಮಯ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ:  ಎಲ್ಲಾ ಚುನಾವಣೆಗಳನ್ನು ಒಟ್ಟೊಟ್ಟಿಗೆ ನಡೆಸಿ ಹಣ ಸಮಯ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ಮಾರ್ಚ್ 19 ರಂದು ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಗ್ರಾಮ, ತಾಲೂಕು, ಸ್ಥಳೀಯ ಸಂಸ್ಥೆ ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನೆಲ್ಲಾ ಒಟ್ಟಿಗೆ ನಡೆಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ಹಾಗೂ ಸಮಯ ವ್ಯಯವಾಗುವುದು ತಪ್ಪುತ್ತದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಪ್ರತಿ ವರ್ಷ ಏನಿಲ್ಲ ಎಂದ್ರೂ ಮೂರು ತಿಂಗಳಿಗೆ ಒಮ್ಮೆ ಒಂದಿಲ್ಲೊಂದು ಚುನಾವಣೆ ನಡೆಯುತ್ತಿರುತ್ತೆ. ಪಂಚಾಯ್ತಿ ಚುನಾವಣೆ, ಪಟ್ಟಣ ಪುರಸಭೆ, ನಗರಸಭೆ, ಎಂಎಲ್‌ಸಿ, ಎಂಎಲ್ಎ ಹೀಗೆ ದೇಶದ ಒಂದಿಲ್ಲ ಒಂದೆಡೆ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಇದರಿಂದ ಯಾರಿಗೆ ಲಾಭ, ದೇಶಕ್ಕೆ ಎಷ್ಟು ನಷ್ಟ ಎಂಬುದು ಜನಕ್ಕೆ ಗೊತ್ತು.

ಎಲ್ಲ ಚುನಾವಣೆಗಳನ್ನು ಒಟ್ಟಾಗಿ ನಡೆಸಿದರೆ ಸಮಯ, ಹಣ ಉಳಿತಾಯವಾಗುತ್ತೆ . ಪದೇ ಪದೇ ಚುನಾವಣೆ ನಡೆಸಿದರೆ ಆಡಳಿತ ಯಂತ್ರದ ಕಾರ್ಯ ನಿರ್ವಹಣೆಗೂ ಅಡ್ಡಿಯಾಗುತ್ತೆ . ಅದಕ್ಕಾಗಿ ಎಲ್ಲ ಎಲೆಕ್ಷನ್ ಒಮ್ಮೆಲೆ ನಡೆಯುವುದು ಸೂಕ್ತ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ಅಧಿವೇಶನಕ್ಕೆ ಮುನ್ನ ನಡೆದ ಸರ್ವ ಪಕ್ಷ ಸಭೆಯಲ್ಲೂ ಸರ್ಕಾರ ಈ ವಿಷಯ ಪ್ರಸ್ತಾಪಿಸಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com