ತಲಾಖ್ ನಿಷೇಧಿಸುವಂತೆ ಕೇಂದ್ರಕ್ಕೆ ಸಮಿತಿ ಶಿಫಾರಸು

ಮುಸ್ಲಿಂ ಪುರುಷರು ಬಾಯಿ ಮಾತಿನಲ್ಲಿ ಏಕಪಕ್ಷೀಯವಾಗಿ ಮತ್ತು ಒಮ್ಮೆಲೇ 3 ಬಾರಿಗೆ ಹೇಳುವ ತಲಾಖ್ ಅನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ರೂಪಿಸಿರುವ ಉನ್ನತ...
ಮುಸ್ಲಿಂ ಮಹಿಳೆಯರು
ಮುಸ್ಲಿಂ ಮಹಿಳೆಯರು

ನವದೆಹಲಿ: ಮುಸ್ಲಿಂ ಪುರುಷರು ಬಾಯಿ ಮಾತಿನಲ್ಲಿ ಏಕಪಕ್ಷೀಯವಾಗಿ ಮತ್ತು ಒಮ್ಮೆಲೇ 3 ಬಾರಿಗೆ ಹೇಳುವ ತಲಾಖ್ ಅನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ರೂಪಿಸಿರುವ ಉನ್ನತ ಮಟ್ಟದ ಸಮಿತಿಯು ಶಿಫಾರಸು ಮಾಡಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಿಸಿದ್ದ ಈ ಉನ್ನತ ಮಟ್ಟದ ಸಮಿತಿಯು ಸಿದ್ಧಪಡಿಸಿರುವ ಬೃಹತ್ ಗಾತ್ರದ ವರದಿಯಲ್ಲಿ ಮುಸ್ಲಿಂ ಸದಸ್ಯರಿಗೆ ಸಂಬಂಧಿಸುವ ಕುಟುಂಬ ಕಾನೂನುಗಳು ವ್ಯಾಪಕ ವಿಶ್ಲೇಷಣೆಗೆ ಒಳಪಟ್ಟಿವೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. ಹಾಗಿದ್ದರೂ ಈ ಉನ್ನತ ಮಟ್ಟದ ಸಮಿತಿಯು ಮಾಡಿರುವ ಶಿಫಾರಸುಗಳನ್ನು ಈ ತನಕ ಬಹಿರಂಗಪಡಿಸಿರಲಿಲ್ಲ.

ಬಹುಸಂಖ್ಯೆಯ ಮುಸ್ಲಿಂ ಮಹಿಳೆಯರು ಏಕಪಕ್ಷೀಯ ತಲಾಖ್ ಪದ್ದತಿಯನ್ನು ನಿಷೇಧಿಸುವಂತೆ ಮನವಿ ಮಾಡಿಕೊಂಡಿದ್ದರು. ಭಾರತದಲ್ಲಿ ಶೇ.90ಕ್ಕೂ ಅಧಿಕ ಮುಸ್ಲಿಂ ಮಹಿಳೆಯರು ತಲಾಖ್ ನಿಷೇಧಿಸಬೇಕೆಂದು ಬಯಸುತ್ತಾರೆ ಮತ್ತು ಮುಸ್ಲಿಂ ಪುರುಷರು ಎರಡನೇ ಮದುವೆಯಾಗುವುದನ್ನು ದ್ವೇಷಿಸುತ್ತಾರೆ ಎಂಬ ಸಂಗತಿಯನ್ನು ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com