
ನವದೆಹಲಿ: ಪಠಾಣ್ ಕೋಟ್ ದಾಳಿ ನಡೆಸಿದ ಉಗ್ರರು ಪಾಕಿಸ್ತಾನದ ಪ್ರಜೆಗಳು ಎಂದು ಪಾಕ್ ಒಪ್ಪಿಕೊಂಡಿದ್ದು, ಭಾರತದ ಆರೋಪ ಅಂತಾರಾಷ್ಟ್ರೀಯ ಸಮುದಾಯದ ದೃಷ್ಟಿಯಲ್ಲಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಹಂಚಿಕೆ ಮಾಡಿಕೊಳ್ಳಲು ಎನ್ಐಎ ಗೆ ಮನವಿ ಮಾಡಿದ್ದ ಪಾಕಿಸ್ತಾನ ಜಂಟಿ ತನಿಖಾ ತಂಡ, ದಾಳಿ ನಡೆಸಿದ ಉಗ್ರರು ತನ್ನ ದೇಶದ ಪ್ರಜೆಗಳು ಎಂದು ಒಪ್ಪಿಕೊಂಡಿದೆ.
ಹೊರದೇಶಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸಿದ ಪಾಕ್ ಪ್ರಜೆಗಳಿಗೆ ಅನ್ವಯಿಸುವ ಪಾಕಿಸ್ತಾನ ಸಿಆರ್ ಪಿಸಿ ಸೆಕ್ಷನ್ 188 ರ ಅಡಿಯಲ್ಲಿ ಪಾಕಿಸ್ತಾನ ಸಾಕ್ಷ್ಯಗಳ ಹಂಚಿಕೆಗೆ ಮನವಿ ಮಾಡಿದೆ. ಆದ್ದರಿಂದ ದಾಳಿ ನಡೆಸಿದವರು ಪಾಕಿಸ್ತಾನದ ಉಗ್ರರೇ ಎಂದು ಜಂಟಿ ತನಿಖಾ ತಂಡ ಒಪ್ಪಿಕೊಂಡಂತಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಪಠಾಣ್ ಕೋಟ್ ದಾಳಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ಭಾರತಕ್ಕೆ ಬಂದಿರುವ ಪಾಕಿಸ್ತಾನ ಜಂಟಿ ತನಿಖಾ ತಂಡ ಮಾ.31ರಂದು ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ದಾಳಿಯಲ್ಲಿ ಸೇನೆ ಹೊಡೆದುರುಳಿಸಿದ್ದ 4 ಉಗ್ರರ ಡಿಎನ್ಎ ವರದಿಗಳನ್ನು ಪಡೆದಿದೆ.
Advertisement