ತೆಲಂಗಾಣ: ಶಾಲೆಯಲ್ಲಿ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ವಿದ್ಯಾರ್ಥಿನಿಯರಿಗೆ ಸಲ್ವಾರ್ ಕಮೀಜ್ ಸಮವಸ್ತ್ರ ಕಡ್ಡಾಯ ಮಾಡಿ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಶಾಸಕಿ ಕೊಂಡ ಸುರೇಖಾ ಹೇಳಿದ್ದಾರೆ.
ತೆಲಂಗಾಣ ವಿಧಾನಸಭೆಯಲ್ಲಿ ಶಾಲೆಯಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಯಲಿರುವ ಮಾರ್ಗಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಸುರೇಖಾ ಈ ಸಲಹೆಯನ್ನು ನೀಡಿದ್ದಾರೆ.
ಶಾಲೆ ಸಮವಸ್ತ್ರಗಳು ಚಿಕ್ಕ ಬಟ್ಟೆಯಾಗಿರಬಾರದು. ಸಲ್ವಾರ್ ಕಮೀಜ್ ಆದರೆ ಅದು ಇಡೀ ದೇಹವನ್ನು ಮುಚ್ಚುವುದಲ್ಲದೆ ವಿನಮ್ರತೆಯನ್ನು ಸೂಚಿಸುತ್ತದೆ ಎಂದು ಶಾಸಕಿ ಅಭಿಪ್ರಾಯ ಪಟ್ಟಿದ್ದಾರೆ.