
ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಿನ ಪ್ರಧಾನಿ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಉಪ ಪ್ರಧಾನಿ ಆಗಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಹೇಳಿಕೆ ನೀಡಿ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಈ ಇಬ್ಬರು ರಾಜಕಾರಣಿಗಳು ತುಂಬಾ ಪ್ರಾಮಾಣಿಕರಾಗಿದ್ದು , ಇವರ ವಿರುದ್ಧ ವಯಕ್ತಿವಾಗಿ ಯಾವುದೇ ದಾಖಲಾಗಿಲ್ಲ. ಹೀಗಾಗಿ ಇವರಿಬ್ಬರು ದೇಶದ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ನಮ್ಮ ರಾಜಕಾರಣಿಗಳನ್ನು ನಾನು ತುಂಬಾ ಟೀಕಿಸುತ್ತೇನೆ ಎಂದು ಹೇಳಿರುವ ಅವರು ನಿತೀಶ್ ಪ್ರಧಾನಿ ಕೇಜ್ರಿವಾಲ್ ಉಪ ಪ್ರಧಾನಿಯಾಗುವುದನ್ನು ಭಾರತ ದೇಶದ ಜನರು ನಿರ್ಧರಿಸಬೇಕು ಎಂದು ಹೇಳಿದ್ದಾರೆ.
Advertisement