ಅದಲ್ಲದೇ, ಭಾರತೀಯ ಪತ್ರಿಕಾ ಮಂಡಳಿ(ಪಿಸಿಐ)ಗೆ ಶಕ್ತಿ ತುಂಬುವ ಸಲುವಾಗಿ 1978ರ ಪತ್ರಿಕಾ ಮಂಡಳಿ ಕಾಯ್ದೆಗೆ ತಿದ್ದುಪಡಿ ತಂದು ಸ್ವಾಯತ್ತ, ಶಾಸನಬದ್ಧ ಅಧಿಕಾರ ನೀಡಲು ಸರ್ಕಾರ ಚಿಂತನೆ ನಡೆಸಿದೆ. ತಪ್ಪು ಮಾಡುವ ಪತ್ರಿಕೆಗಳು ಹಾಗೂ ಪತ್ರಕರ್ತರನ್ನು ದಂಡಿಸುವ ಸಲುವಾಗಿ ಈ ಕಾಯ್ದೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.