ಉತ್ತರಾಖಂಡ್: ಬಹುಮತ ಪರೀಕ್ಷೆ ಪರಿಗಣಿಸುವಂತೆ ಸರ್ಕಾರಕ್ಕೆ ಸುಪ್ರೀಂ ಸೂಚನೆ

ಮಾರ್ಚ್ ೨೭ ರಿಂದ ಉತ್ತರಾಖಾಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿರುವ ಪ್ರಕರಣದ ವಿಚಾರಣೆ ಮುಂದುವರೆಸಿದ ಸುಪ್ರೀಂ ಕೋರ್ಟ್, ಹೊರಹಾಕಲಾಗಿರುವ ಮುಖ್ಯಮಂತ್ರಿ ಹರೀಶ್ ರಾವತ್
ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್
ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್

ನವದೆಹಲಿ: ಮಾರ್ಚ್ ೨೭ ರಿಂದ ಉತ್ತರಾಖಾಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿರುವ ಪ್ರಕರಣದ ವಿಚಾರಣೆ ಮುಂದುವರೆಸಿದ ಸುಪ್ರೀಂ ಕೋರ್ಟ್, ಹೊರಹಾಕಲಾಗಿರುವ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಬಹುಮತ ಸಾಬೀತು ಪಡಿಸಲು ಅವಕಾಶ ನೀಡುವ ಸಾಧ್ಯತೆಯನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಕೋರ್ಟ್ ಸೂಚಿಸಿದೆ.

ನ್ಯಾಯಾಧೀಶ ದೀಪಕ್ ಮಿಶ್ರಾ ಮುಖಂಡತ್ವದ ಅಪೆಕ್ಸ್ ನ್ಯಾಯಾಲಯ ಪೀಠ, ಇದರ ಬಗ್ಗೆ ಸರ್ಕಾರದಿಂದ ಸೂಚನೆ ಪಡೆದು ಕೋರ್ಟ್ ಗೆ ತಿಳಿಸುವಂತೆ ಅಟಾರ್ನಿ ಜನರಲ್ ಮುಕುಲ್ ರೋಹತ್ಗಿ ಅವರಿಗೆ ಸೂಚಿಸಿದೆ.

ಪರ್ವತ ರಾಜ್ಯದಲ್ಲಿ ಎದ್ದಿರುವ ರಾಜಕೀಯ ಅನಿಶ್ಚಿತತೆಯನ್ನು ಬಗೆಹರಿಸುವಂತೆ ಈ ಹಿಂದೆ ಕೂಡ ಕೋರ್ಟ್ ಹೇಳಿತ್ತು ಎಂದು ಅಭಿಪ್ರಾಯ ಪಟ್ಟಿದೆ.

ಮಂಗಳವಾರ ಮಧ್ಯಾಹ್ನ ೨ ಘಂಟೆಗೆ ವಿಚಾರಣೆ ಮತ್ತೆ ಆರಂಭವಾಗಬೇಕಿತ್ತು ಆದರೆ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ಈ ಪ್ರಕರಣವನ್ನು ನ್ಯಾಯಾಧೀಶ ಶಿವ ಕೀರ್ತಿ ಸಿಂಗ್ ಮತ್ತು ಮಿಶ್ರಾ ಅವರನ್ನು ಒಳಗೊಂಡ ಪೀಠ ವಿಚಾರಣೆ ಮಾಡಬೇಕಿತ್ತು ಆದರೆ ಸಿಂಗ್ ಅವರು ಮಧ್ಯಾಹ್ನ ೨ ಘಂಟೆಗೆ ಮತ್ತೊಂದು ಪ್ರಕರಣದ ವಿಚಾರಣೆ ಮಾಡಬೇಕಿರುವ ಪೀಠದ ಸದಸ್ಯರಾಗಿರುವುದರಿಂದ ಉತ್ತರಾಖಂಡ್ ವಿಚಾರಣೆಯನ್ನು ಮುಂದೂಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com