
ದೆಹಲಿ: ಈ ಹಿಂದೆ ಯೋಗಗುರು ಬಾಬಾ ರಾಮ್ ದೇವ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಇದ್ದಕ್ಕಿದ್ದಂತೆ ರಾಮದೇವ್ ಅವರನ್ನು ಹಾಡಿ ಹೊಗಳಿದ್ದಾರೆ,
ಬಾಬಾ ರಾಮ್ ದೇವ್ ಮತ್ತು ಲಾಲೂಪ್ರಸಾದ್ ಯಾದವ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಲಾಲೂ ಪತಂಜಲಿ ಯಶಸ್ಸಿನಿಂದ ಅಸೂಯೆ ಪಟ್ಟಿರುವ ಕೆಲವರು ಅದರ ಹೆಸರು ಕೆಡಿಸಲು ಕುತಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ದೇಶಕ್ಕಾಗಿ ಒಳಿತನ್ನು ಮಾಡುತ್ತಿರುವುದರಿಂದ ಪತಂಜಲಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಿದರು. ಕಠಿಣ ಶ್ರಮದಿಂದ ಹಣ ಗಳಿಸುತ್ತಿರುವ ಬಾಬಾ ರಾಮ್ ದೇವ್ ಬಂದ ಆದಾಯವನ್ನು ಒಳ್ಳೆಯ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಲಾಲು ಪ್ರಸಾದ್ ಯಾದವ್ ಅವರಿಗೆ ಪತಂಜಲಿ ಉತ್ಪನ್ನಗಳನ್ನು ಉಡುಗೊರೆಯಾಗಿ ಕೊಟ್ಟ ಬಾಬಾ ರಾಮದೇವ್ ಯೋಗ, ಪ್ರಾಣಾಯಾಮವನ್ನು ಹೇಳಿಕೊಟ್ಟರು. ಲಾಲು ಮುಖಕ್ಕೆ ತಮ್ಮ ಕಂಪನಿಯಿಂದ ಉತ್ಪಾದಿಸಿರುವ ಕ್ರೀಮ್ ಹಚ್ಚಿದ ಬಾಬಾ ರಾಮದೇವ್ ಮೊದಲೇ ಲಾಲು ಅವರ ಮುಖ ಕೆಂಪಗಿದೆ. ಈಗ ಚಿನ್ನದ ಬಣ್ಣದಲ್ಲಿ ಹೊಳೆಯುತ್ತಿದೆ ಎಂದು ನಗೆ ಚಟಾಕಿ ಹಾರಿಸಿದರು.
Advertisement