ರಾಬರ್ಟ್ ವಾದ್ರಾ, ರಾಹುಲ್ ಗಾಂಧಿ
ರಾಬರ್ಟ್ ವಾದ್ರಾ, ರಾಹುಲ್ ಗಾಂಧಿ

ಕಿಕ್ ಬ್ಯಾಕ್ ಗಾಗಿ ರಾಹುಲ್, ವಾದ್ರಾರಿಂದ ಹೊಸ ಯೋಜನೆ: ಸೋಮಯ್ಯ

ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಬಿಜೆಪಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ...
ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಬಿಜೆಪಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ಭಾವ ರಾಬರ್ಟ್ ವಾದ್ರಾ ಅವರು, ಕಿಕ್ ಬ್ಯಾಕ್ ಪಡೆಯುವುದಕ್ಕಾಗಿಯೇ ಡಿಎಲ್ಎಫ್ ಎಂಬ ಹೊಸ ಯೋಜನೆ ಆರಂಭಿಸಿದ್ದಾರೆ ಎಂದು ಬಿಜೆಪಿ ಸಂಸದ ಕಿರಿಟ್ ಸೋಮಯ್ಯ ಅವರು ಬುಧವಾರ ಆರೋಪಿಸಿದ್ದಾರೆ.
ಅಂಗಡಿಗಳನ್ನು ಖರೀದಿಸುವುದರ ಹಿಂದಿನ ನಿಮ್ಮ ಉದ್ದೇಶವಾದರೂ ಏನು? ರಾಜಕೀಯ ಬಿಟ್ಟು ತರಕಾರಿ ಅಂಗಡಿ ತೆರೆಯಲು ನಿರ್ಧರಿಸಿದ್ದೀರಾ? ಎಂದು ರಾಹುಲ್ ಗಾಂಧಿಯನ್ನು ಬಿಜೆಪಿ ಸಂಸದ ಪ್ರಶ್ನಿಸಿದ್ದಾರೆ.
'ಅಂಗಡಿಗಳನ್ನು ಖರೀದಿಸಿರುವುದಾಗಿ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಆದರೆ ಅವರು ಯಾವ ಬೆಲೆಗೆ ಆ ಅಂಗಡಿಗಳನ್ನು ಖರೀದಿಸಿದ್ದಾರೆ ಮತ್ತು ಮತ್ತೆ ಅವುಗಳನ್ನು ಎಂಜಿಎಫ್ ಗೆ ಯಾವ ಬೆಲೆಗೆ ಮಾರಾಟ ಮಾಡಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಲಿ' ಎಂದಿದ್ದಾರೆ.
ರಾಹುಲ್ ಗಾಂಧಿ ಅವರು ದೆಹಲಿಯಲ್ಲಿರುವ ಎಂಜಿಎಫ್ ಮಾಲೀಕತ್ವದ ಮಾಲ್ ವೊಂದರಲ್ಲಿ ಅಂಗಡಿಗಳನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಅಲ್ಲದೆ ಇದನ್ನು ಅವರು ತಮ್ಮ ಅಫಿಡವಿಟ್ ನಲ್ಲೂ ತಿಳಿಸಿದ್ದಾರೆ ಎಂದು ಸೋಮಯ್ಯ ಆರೋಪಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com