ಪ್ರತ್ಯೇಕತಾವಾದಿಗಳ ಬಗ್ಗೆ ನಿಲುವು ಬದಲಾವಣೆ: ಕೇಂದ್ರ ಸರ್ಕಾರ ಗೋಸುಂಬೆಯನ್ನೂ ನಾಚಿಸುತ್ತದೆ ಎಂದ ಶಿವಸೇನೆ

ಬಿಜೆಪಿ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿರುವ ಶಿವಸೇನೆ, ಹುರಿಯತ್ ಪ್ರತ್ಯೇಕತಾವಾದಿಗಳ ವಿಷಯದಲ್ಲಿ ನಿಲುವು ಬದಲಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
ಶಿವಸೇನೆ
ಶಿವಸೇನೆ

ನವದೆಹಲಿ: ಬಿಜೆಪಿ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿರುವ ಶಿವಸೇನೆ, ಹುರಿಯತ್ ಪ್ರತ್ಯೇಕತಾವಾದಿಗಳ ವಿಷಯದಲ್ಲಿ ನಿಲುವು ಬದಲಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.  
ಹುರಿಯತ್ ನಾಯಕರಿಗೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಅವಕಾಶ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶಿವಸೇನೆ, ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರವನ್ನು ಬಣ್ಣ ಬದಲಿಸುವ ಗೋಸುಂಬೆ ಎಂದು ಜರಿದಿದೆ. ಹುರಿಯತ್ ನಾಯಕರು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಅನುಮತಿ ನೀಡಿದ್ದೀರ, ನಾಳೆ ಕಾಶ್ಮೀರ ವಿಷಯದಲ್ಲಿ ಮಸೂದ್ ಅಜರ್, ದಾವೂದ್ ಇಬ್ರಾಹಿಂ ಹಾಗೂ ಲಖ್ವಿಯಂತಹ  ಉಗ್ರರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸುತ್ತೀರ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಮೂಲಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಅಖಂಡ ಭಾರತದ ಪರಿಕಲ್ಪನೆ ಈ ರೀತಿಯಾಗಿ ನನಸಾಗಲಿದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂದು ಹೇಳಿದೆ.
ಕೇಂದ್ರ ಸರ್ಕಾರ ಹುರಿಯತ್ ಪ್ರತ್ಯೇಕತಾವಾದಿಗಳ ಬಗ್ಗೆ ನಿಲುವು ಬದಲಿಸಿಕೊಂಡಿರುವುದು ಅಯೋಧ್ಯೆಯಲ್ಲಿರುವ ರಾಮ ಮಂದಿರ ವಾಸ್ತವದಲ್ಲಿ ಬಾಬ್ರಿ ಮಸೀದಿ ಎಂದು ಹೇಳಿದಂತಾಗಿದೆ, ಇತ್ತೀಚಿನ ದಿನಗಳಲ್ಲಿ ಸೂಕ್ಷ್ಮ ವಿಷಯಗಳು ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ ಎಂದು ಶಿವಸೇನೆ ಆರೋಪಿಸಿದ್ದು, ಬಣ್ಣ ಬದಲಿಸುವ ವಿಷಯದಲ್ಲಿ ಕೇಂದ್ರ ಸರ್ಕಾರ ಗೋಸುಂಬೆಯನ್ನೂ ನಾಚಿಸುತ್ತದೆ ಎಂದು ಟೀಕಿಸಿದೆ.
ಹುರಿಯತ್ ನಾಯಕರೂ ದೇಶದ ಪ್ರಜೆಗಳಾಗಿದ್ದು, ಅವರು ಇತರ ದೇಶದ ರಾಯಭಾರಿಗಳೊಂದಿಗೆ ಮಾತುಕತೆ ನಡೆಸಬಹುದು ಎಂದು ಕೇಂದ್ರ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ವಿಕೆ ಸಿಂಗ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com