ದಿವಾಳಿತನ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ದೇಶದಲ್ಲಿ ಕಂಪೆನಿಗಳ ವ್ಯಾಪಾರ, ವಹಿವಾಟಿಗೆ ಅನುಕೂಲವಾಗುವ ದಿವಾಳಿತನ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ...
ಭಾರತ ಸಂಸತ್ತು
ಭಾರತ ಸಂಸತ್ತು
Updated on: 

ನವದೆಹಲಿ: ದೇಶದಲ್ಲಿ ಕಂಪೆನಿಗಳ ವ್ಯಾಪಾರ, ವಹಿವಾಟಿಗೆ ಅನುಕೂಲವಾಗುವ ದಿವಾಳಿತನ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಗುರುವಾರ ಲೋಕಸಭೆಯಲ್ಲಿ ದಿವಾಳಿತನ ಮತ್ತು ದಿವಾಳಿತನ ಕೋಡ್ 2016ಗೆ ಅಂಗೀಕಾರ ದೊರೆತಿದ್ದು, ಸಂಸತ್ತಿನ ಜಂಟಿ ಸಮಿತಿ ಪ್ರಸ್ತಾಪಿಸಿದ ಎಲ್ಲಾ ತಿದ್ದುಪಡಿಗಳನ್ನು ಸರ್ಕಾರ ಅಂಗೀಕರಿಸಿದೆ.

ಈಗಿರುವ ದಿವಾಳಿತನ ಕಾನೂನನ್ನು ಬದಲಾಯಿಸಿ ದಿವಾಳಿತನದ ಸಮಸ್ಯೆಗಳನ್ನು ಬಗೆಹರಿಸಲು ಕಾಲಮಿತಿ ಒದಗಿಸುತ್ತದೆ. ವ್ಯಕ್ತಿಗಳು, ಕಂಪೆನಿಗಳು, ಬ್ಯಾಂಕು, ಸೀಮಿತ ಹೊಣೆಗಾರಿಕೆ ಸಹಭಾಗಿತ್ವ ಮತ್ತು ಪಾಲುದಾರಿಕೆ ಸಂಸ್ಥೆಗಳು ಹೊಸ ಕಾನೂನು ವ್ಯಾಪ್ತಿಗೆ ಒಳಗೊಳ್ಳುತ್ತದೆ. ಕಂಪೆನಿ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಪೊರೇಟ್ ದಿವಾಳಿತನ ಎದುರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಸಾಲ ನೀಡಿದವರು ಬೇಗನೆ ಸಾಲವನ್ನು ವಸೂಲು ಮಾಡಿಕೊಳ್ಳಲು ಸಹಕಾರಿಯಾಗುತ್ತದೆ.

ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಸೂದೆ ಇನ್ನು ಒಪ್ಪಿಗೆ ಪಡೆಯಲು ರಾಜ್ಯಸಭೆಗೆ ಹೋಗುತ್ತದೆ. ಅಲ್ಲಿ ಕೂಡ ಅಂಗೀಕಾರಗೊಳ್ಳುವ ನಿರೀಕ್ಷೆ ಸರ್ಕಾರಕ್ಕಿದೆ.ಈ ಮಸೂದೆ ಜಾರಿಗೆ ಬಂದರೆ ವಿಶ್ವ ಬ್ಯಾಂಕಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಮೇಲಕ್ಕೇರುವ ಸಾಧ್ಯತೆಯಿದೆ. ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಇದೀಗ 136ನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com