ನೀರು ಪೋಲು ಮಾಡುವವರಿಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಹರ್ಯಾಣ ಸರ್ಕಾರದ ಚಿಂತನೆ
ಚಂಡೀಗಢ: ನೀರಿಗೆ ಬರ ಬಂದಿರುವ ದಿನಗಳಲ್ಲಿ ಹರ್ಯಾಣ ಸರ್ಕಾರ ನೀರಿನ ಕೈಗೊಳ್ಳಲು ಮುಂದಾಗಿರುವ ಕ್ರಮ ಅಚ್ಚರಿ ಮೂಡಿಸುವಂತಿದೆ. ರಾಜ್ಯದಲ್ಲಿ ಯಾರೇ ನೀರು ಪೋಲು ಮಾಡಿದರು ಅವರಿಗೆ 3 ತಿಂಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸುವ ಕಾನೂನನ್ನು ಜಾರಿಗೆ ತರಲು ಹರ್ಯಾಣ ಸರ್ಕಾರ ಚಿಂತನೆ ನಡೆಸಿದೆ.
ಈ ಕುರಿತು ಮಾತನಾಡಿರುವ ಹರ್ಯಾಣದ ಲೋಕೋಪಯೋಗಿ ಸಚಿವ, ರಸ್ತೆಗೆ ನೀರು ಚೆಲ್ಲಿ, ರಸ್ತೆ ಹಾಳು ಮಾಡುವುದು ಹಾಗೂ ನೀರನ್ನು ಪೋಲು ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲು ಶೀಘ್ರವೇ ಕಾನೂನನ್ನು ಜಾರಿಗೊಳಿಸಲಾಗುತ್ತದೆ, ಕಾನೂನು ಜಾರಿಯಾದ ನಂತರ ಯಾರೆ ನೀರು ಚೆಲ್ಲಿದರೂ ಅವರಿಗೆ 10 ಸಾವಿರ ರೂ ದಂಡ, 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇನ್ನು ರಸ್ತೆಗಳ ನಿರ್ಮಾಣಕ್ಕೆ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿರುವ ಲೋಕೋಪಯೋಗಿ ಸಚಿವ ನರ್ಬೀರ್ ಸಿಂಗ್, ಜರ್ಮನಿಯ ಸಹಯೋಗದಲ್ಲಿ ಹಸಿರು ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ