ಅಬ್ಬಾ! ಗೌತಮ್ ಅದಾನಿ ಬ್ಯಾಂಕ್ ಸಾಲ ಮಲ್ಯಗಿಂತ 8 ಪಟ್ಟು ಹೆಚ್ಚು

ಇಡೀ ದೇಶದ ರೈತರು ಬೆಳೆ ಬೆಳೆಯುವ ಸಲುವಾಗಿ ಮಾಡಿರುವ ಒಟ್ಟಾರೆ ಸಾಲ 72 ಸಾವಿರ ಕೋಟಿ. ಅದಾನಿ ಗ್ರೂಪ್ ಸರ್ಕಾರಿ ಬ್ಯಾಂಕ್ ಗಳಿಂದ 72 ಸಾವಿರ ಕೋಟಿ ರು. ಸಾಲ ...
ಗೌತಮ್ ಅದಾನಿ
ಗೌತಮ್ ಅದಾನಿ

ನವದೆಹಲಿ: ಇಡೀ ದೇಶದ ರೈತರು ಬೆಳೆ ಬೆಳೆಯುವ ಸಲುವಾಗಿ ಮಾಡಿರುವ ಒಟ್ಟಾರೆ ಸಾಲ  72 ಸಾವಿರ ಕೋಟಿ.  ಅದಾನಿ ಗ್ರೂಪ್ ಸರ್ಕಾರಿ ಬ್ಯಾಂಕ್ ಗಳಿಂದ 72  ಸಾವಿರಕೋಟಿ ರು. ಸಾಲ ಪಡೆದಿದ್ದಾರೆ. ಅಂದರೆ ಉದ್ಯಮಿ ವಿಜಯ್ ಮಲ್ಯ ಪಡೆದ ಸಾಲಕ್ಕಿಂತ 8 ಪಟ್ಟು ಹೆಚ್ಚು ಸಾಲವನ್ನು ಅದಾನಿ ಸರ್ಕಾರಿ ಬ್ಯಾಂಕ್ ಗಳಿಂದ ಪಡೆದಿದ್ದಾರೆ.

ರಾಜ್ಯಸಭೆ ಕಲಾಪದ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ ಜೆಡಿಯು ಸದಸ್ಯ ಪವನ್ ವರ್ಮಾ, ‘ಅದಾನಿ ಗ್ರೂಪ್ ಬರೋಬ್ಬರಿ ರು. 72 ಸಾವಿರ ಕೋಟಿ ಸಾಲ ಹೊಂದಿದೆ. ಸರ್ಕಾರಿ ಬ್ಯಾಂಕ್  (ಪಿಎಸ್ ಯು) ಗಳಲ್ಲಿ ಒತ್ತಡ ಹಾಕುವ ಮೂಲಕ, ಸಾಲ ಮರುಪಾವತಿ ಮಾಡಲಾಗದವರಿಗೆ ಅತಿ ಹೆಚ್ಚು ಸಾಲ ಕೊಡಿಸಲಾಗಿದೆ.’ ಎಂದು ಆರೋಪಿಸಿದ್ದಾರೆ.

‘ಪಿಎಸ್ ಯು ಬ್ಯಾಂಕ್ ಗಳಲ್ಲಿ ವಿವಿಧ ಕಾರ್ಪೋರೇಟ್ ಕಂಪನಿಗಳು ಒಟ್ಟಾರೆಯಾಗಿ  5 ಲಕ್ಷ ಕೋಟಿ ಸಾಲ ಮಾಡಿವೆ. ಆ ಪೈಕಿ ಸುಮಾರು ರು, 1.4 ಲಕ್ಷ ಕೋಟಿಯಷ್ಟು ಸಾಲವನ್ನು ಲ್ಯಾಂಕೊ, ಜಿವಿಕೆ, ಸುಜ್ಲೋನ್ ಎನರ್ಜಿ, ಹಿಂದೂಸ್ಥಾನ್ ಕನ್ಸ್ ಸ್ಟ್ರಕ್ಷನ್ಸ್ ಹಾಗೂ ಅದಾನಿ ಗ್ರೂಪ್ ಎಂಬ ಕೇವಲ 5 ಕಂಪನಿಗಳು ಪಡೆದಿವೆ’ ಎಂದು  ಪವನ್ ವರ್ಮಾ ಮಾಹಿತಿ ನೀಡಿದ್ದಾರೆ.

ದೇಶದ ರೈತರ ಸಾಲದಷ್ಟು ಒಂದು ಕಂಪನಿ ಸಾಲ ಮಾಡಿರುವ ಅದಾನಿ ವಿಷಯದಲ್ಲಿ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದನ್ನು ತಿಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಅದಾನಿ ಗ್ರೂಪ್ ಮಾಲೀಕ  ಗೌತಮ್ ಅದಾನಿ  ಪ್ರಧಾನಿ ಮಂತ್ರಿಯವರು ಚೀನಾ, ಬ್ರಿಟನ್, ಅಮೆರಿಕ, ಯುರೋಪ್, ಜಪಾನ್ ಹೀಗೆ ಯಾವುದೇ ದೇಶಕ್ಕೆ ತೆರಳಿದರೂ ಅವರ ಜೊತೆ ಪ್ರವಾಸದಲ್ಲಿ ಪಾಲ್ಗೋಳ್ಳುತ್ತಾರೆ ಎಂದು ಅವರು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com