
ನವದೆಹಲಿ: ಕಾರ್ಗಿಲ್ ಯುದ್ದದಲ್ಲಿ ಹೋರಾಡಿ ನಮ್ಮನ್ನು ರಕ್ಷಿಸಿದ ಸೈನಿಕರೊಬ್ಬರಿಗೆ ಇಂಡಿಗೋ ವಿಮಾನದ ಪೈಲಟ್ ವಿಶೇಷ ಗೌರವ ಸಲ್ಲಿಸಿದ್ದಾರೆ.
ನಿವೃತ್ತ ಐಎಎಫ್ ಫೈಲಟ್ ಹಾಗೂ ಸದ್ಯ ಇಂಡಿಗೋ ಪೈಲಟ್ ಆಗಿ ಕೆಲಸ ಮಾಡುತ್ತಿರುವ ಹರೀಶ್ ನಯನಿ ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ಸೈನಿಕರೊಬ್ಬರು ವಿಮಾನ ಹತ್ತಿದ ತಕ್ಷಣವೇ ಅವರನ್ನು ಕರೆದುಕೊಂಡು ಬಂದು ವಿಮಾನದಲ್ಲಿದ್ದ ಎಲ್ಲಾ 180 ಪ್ರಯಾಣಿಕರಿಗೂ ಪರಿಚಯಿಸಿದ್ದಾರೆ.
1999ರಲ್ಲಿ ನಡೆದ ಕಾರ್ಗಿಲ್ ಯುದ್ದದಲ್ಲಿ ಹೋರಾಡಿ ತನ್ನ ಎರಡು ಕಾಲು ಹಾಗೂ ಬಲಗೈ ಕಳೆದುಕೊಂಡಿರುವ ನಾಯಕ್ ದೀಪ್ ಚಂದ್ ಬಗ್ಗೆ ಹರೀಶ್ ನಯನಿ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಈ ವೇಳೆ ವಿಮಾನದಲ್ಲಿದ್ದ ಎಲ್ಲಾ 180 ಪ್ರಯಾಣಿಕರು ಹೃದಯತುಂಬಿ ಹೆಮ್ಮೆಯ ಸೈನಿಕನಿಗೆ ಚಪ್ಪಾಳೆ ತಟ್ಟಿದ್ದಾರೆ.
ಈ ಒಂದು ಸಂದರ್ಭವನ್ನು ಮತ್ತೊಬ್ಬ ನಿವೃತ್ತ ಐಎಎಫ್ ಪೈಲಟ್ ರಾಜೀವ್ ತ್ಯಾಗಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಹರೀಶ್ ನಯನಿ ಮತ್ತು ನಾಯಕ್ ದೀಪ್ ಚಂದ್ ಇಬ್ಬರಿಗೂ ಸೆಲ್ಯೂಟ್ ಹೇಳಿದ್ದಾರೆ.
Advertisement