
ನವದೆಹಲಿ: ಭಾರತೀಯ ವಾಯುಸೇನಾ ಪಡೆಯ ಪ್ರಮುಖ ಯುದ್ಧ ವಿಮಾನ ರಷ್ಯಾ ನಿರ್ಮಿತ ಸುಖೋಯ್ 30 ಎಂಕೆಐ ವಿಮಾನಕ್ಕೆ ಇಂಜಿನ್ ಸಮಸ್ಯೆ ಕಾಡುತ್ತಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
2014ರ ಏಪ್ರಿಲ್ 1ರಿಂದ ಇಲ್ಲಿಯವರೆಗೂ ಸುಖೋಯ್ ವಿಮಾನಗಳು ಹಾರಾಟ ನಡೆಯುವಾಗಲೇ 34 ಬಾರಿ ಇಂಜಿನ್ ಸಮಸ್ಯೆ ಎದುರಿಸಿದ್ದವು. ಇಂತಹ ಸಂದರ್ಭಗಳಲ್ಲಿ ಒಂದೇ ಇಂಜಿನ್ ನಿಂದ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಲಾಗಿದೆ. ಇನ್ನು ಸುಖೋಯ್ ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
5 ಸುಖೋಯ್ 30ಎಂಕೆಐ ವಿಮಾನಗಳು 2007ರ ಏಪ್ರಿಲ್ 1 ರಿಂದ 2015ರ ಮಾರ್ಟ್ 31 ನಡುವಣ ಅಪಘಾತಕ್ಕೀಡಾಗಿದ್ದವು. ಅವುಗಳ ಪೈಕಿ 3 ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಕೊಂಡಿದ್ದು ತನಿಖೆಯ ನಂತರ ದೃಢಪಟ್ಟಿವೆ.
ಸುಖೋಯ್ ವಿಮಾನಗಳ ತಾಂತ್ರಿಕ ಸಮಸ್ಯೆ ಕುರಿತಂತೆ ರಷ್ಯಾದೊಂದಿಗೆ ಮಾತುಕತೆ ನಡೆಸಿದ್ದು, ಎಚ್ಎಎಲ್ನಲ್ಲಿ ವಿಮಾನಗಳ ಇಂಜಿನ್ ದುರಸ್ತಿ ಮಾಡಲು ಕೆಲವೊಂದು ಸಲಹೆಗಳನ್ನು ನೀಡಿದೆ ಎಂದು ಪರಿಕ್ಕರ್ ತಿಳಿಸಿದ್ದಾರೆ.
Advertisement