ಕೇಂದ್ರ ಸರ್ಕಾರದ ಎನಿಮಿ ಆಸ್ತಿ ಕಾಯ್ದೆ ತಿದ್ದುಪಡಿಗೆ ರಾಜ್ಯಸಭೆಯ ಅಂಗೀಕಾರ ಅನುಮಾನ?

ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದ ಎನಿಮಿ ಪ್ರಾಪರ್ಟಿ(ಶತೃ ಆಸ್ತಿ) ತಿದ್ದುಪಡಿ ಕಾಯ್ದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆಯುವುದು ಅನುಮಾನವಾಗಿದೆ.
ರಾಜ್ಯಸಭೆ (ಸಂಗ್ರಹ ಚಿತ್ರ)
ರಾಜ್ಯಸಭೆ (ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದ ಎನಿಮಿ ಪ್ರಾಪರ್ಟಿ(ಶತೃ ಆಸ್ತಿ) ತಿದ್ದುಪಡಿ ಕಾಯ್ದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆಯುವುದು ಅನುಮಾನವಾಗಿದೆ.
ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿರುವ ನಾಲ್ಕು ಪಕ್ಷಗಳು, ಈ ಹಿಂದಿನ ಕಾಯ್ದೆ ಹೆಚ್ಚು ಸಮತೋಲನವಾಗಿತ್ತು. ಆದರೆ ತಿದ್ದುಪಡಿ ಕಾಯ್ದೆ ಸ್ವಾಭಾವಿಕ ನ್ಯಾಯದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ತಗಾದೆ ತೆಗೆದಿವೆ. ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ಜೆಡಿಯು, ಸಿಪಿಐ ಹಾಗೂ ಸಮಾಜವಾದಿ ಪಕ್ಷ, ಕಾಯ್ದೆಯಲ್ಲಿ ಮಾಡಿರುವ ಬದಲಾವಣೆಗಳು ಲಕ್ಷಾಂತರ ಭಾರತೀಯ ನಾಗರಿಕರಿಗೆ ಶಿಕ್ಷೆ ವಿಧಿಸುವಂತಿದೆಯೇ ಹೊರತು ಶತೃ ಸರ್ಕಾರದ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿವೆ.  
ಇನ್ನು ಶತ್ರು ಆಸ್ತಿ ಕಾಯ್ದೆ ತಿದ್ದುಪಡಿ ಕುರಿತ  ಸೆಲೆಕ್ಟ್ ಕಮಿಟಿ ವರದಿಯಲ್ಲಿ ಅಭಿಪ್ರಾಯ ಮಂಡಿಸಿರುವ ನಾಲ್ಕೂ ಪಕ್ಷದ ಪ್ರತಿನಿಧಿಗಳು ತಿದ್ದುಪಡಿ ಕಾಯ್ದೆಗೆ ಅಸಮ್ಮತಿ ಟಿಪ್ಪಣಿಗಳನ್ನು ನೀಡಿದ್ದಾರೆ. ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿ ಹೊಂದಿರುವ ಆಸ್ತಿಯ ಮೇಲೆ ಅಧಿಕಾರ ಹೊಂದಲು ಶತೃ ಆಸ್ತಿ ಕಾಯ್ದೆಯಿಂದ ಸಾಧ್ಯವಾಗಲಿದೆ 1965ರ ಭಾರತ-ಪಾಕ್ ಯುದ್ದದ ಬಳಿಕ 1968ರಲ್ಲಿ ಘೋಷಣೆಯಾಗಿದ್ದ 47 ವರ್ಷಗಳ ಹಿಂದಿನ ಈ ಶತ್ರು ಆಸ್ತಿ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿತ್ತು. ತಿದ್ದುಪಡಿ ಕಾಯ್ದೆ ಮೂಲಕ ವೈರಿ ಮರಣ ಹೊಂದಿರುವನೋ ಅಥವಾ ನಾಶವಾಗಿರುವನೋ ಎನ್ನುವುದನ್ನು ಪರಿಗಣಿಸದೆ, ರಕ್ಷಕರ ಅಧೀನದಲ್ಲಿರುವ ಆಸ್ತಿಯ ಮೇಲೆ ಹಕ್ಕು ಹೊಂದಬಲ್ಲ ಅಧಿಕಾರ ನೀದಲಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಈ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗದಿದ್ದರೂ ಅನುಮೋದನೆ ಪಡೆಯುವುದು ಸಾಧ್ಯವಾಗಿರಲ್ಲಿಲ್ಲ. ಇದೀಗ ರಾಜ್ಯಸಭೆಯಲ್ಲೂ ತಿದ್ದುಪಡಿ ಮಸೂದೆ ಅಂಗೀಕಾರವಾಗುವುದು ಅನುಮಾನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com