ಜಿಶಾ ಅತ್ಯಾಚಾರ ಪ್ರಕರಣ: ಕುಟುಂಬ ಸದಸ್ಯರ ಹೇಳಿಕೆಗೆ ವ್ಯತಿರಿಕ್ತವಾಗಿರುವ ಮರಣೋತ್ತರ ಪರೀಕ್ಷೆ ವರದಿ?

ಜಿಶಾ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಜಿಶಾ ಕುಟುಂಬ ಸದಸ್ಯರು ನೀಡಿರುವ ಹೇಳಿಕೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಹಿರಂಗವಾಗಿರುವ ಕೆಲವು ಅಂಶಗ ವ್ಯತಿರಿಕ್ತವಾಗಿದೆ.
ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿದ ಜಿಶಾಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವುದು
ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿದ ಜಿಶಾಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವುದು

ಕೇರಳದ ಕಾನೂನು ವಿದ್ಯಾರ್ಥಿನಿ ಜಿಶಾ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಜಿಶಾ ಕುಟುಂಬ ಸದಸ್ಯರು ನೀಡಿರುವ ಹೇಳಿಕೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಹಿರಂಗವಾಗಿರುವ ಕೆಲವು ಅಂಶಗಳೊಂದಿಗೆ ಹೊಂದಾಣಿಕೆಯಾಗದೆ ವ್ಯತಿರಿಕ್ತವಾಗಿದೆ.
ಮರಣೋತ್ತರ ಪರೀಕ್ಷೆ ವರದಿ ಪ್ರತಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದ್ದು ಈ ಬಗ್ಗೆ ವರದಿ ಪ್ರಕಟಿಸಿದೆ. ಜಿಶಾ ಕುಟುಂಬ ಸದಸ್ಯರು, ನೆರೆಯವರು ನೀಡಿರುವ ಮಾಹಿತಿ ಪ್ರಕಾರ ಸಂಜೆ 6 ಗಂಟೆ ಸಮಯದಲ್ಲಿ ಜಿಶಾ ಅತ್ಯಾಚಾರ, ಕೊಲೆ ನಡೆದಿದ್ದು 8 :30 ಕ್ಕೆ ಜಿಶಾ ಶವನ್ನು ಆಕೆಯ ತಾಯಿಗೆ ಕಂಡಿದೆ. ಆದರೆ ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ ಜಿಶಾಳ ಹತ್ಯೆ ನಡೆದಿರುವುದು 9 ಗಂಟೆ ವೇಳೆಯಲ್ಲಿ ಎಂದು ಹೇಳಲಾಗಿದೆ.

ಕುಟುಂಬ ಸದಸ್ಯರು ತನಿಖಾಧಿಕಾರಿಗೆ ನೀಡಿರುವ ಮಾಹಿತಿ ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳ ವರದಿಗೆ ವ್ಯತಿರಿಕ್ತವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಮರಣೋತ್ತರ ಪರೀಕ್ಷೆ ವರದಿಯ ಪ್ರಮುಖಾಂಶಗಳು:

*ಉಸಿರುಗಟ್ಟಿಸಿ ಜಿಶಾಳನ್ನು ಹತ್ಯೆ ಮಾಡಲಾಗಿದ್ದು, ಗುಪ್ತಾಂಗ, ಕುತ್ತಿಗೆ, ಹೊಟ್ಟೆ ಭಾಗಗಳಲ್ಲಿ ಗಾಯಗಳಿರುವುದು ಪತ್ತೆಯಾಗಿದೆ.
* ಜಿಶಾ ಅತ್ಯಾಚಾರಕ್ಕೊಳಗಾಗಿರುವುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ಪಷ್ಟವಾಗಿದೆ.
*ಮರಣೋತ್ತರ ಪರೀಕ್ಷೆಯಲ್ಲಿ  ಉಗುರು, ಕೂದಲಿನ ಮಾದರಿ ಸೇರಿದಂತೆ ಜಿಶಾಳ ದೇಹದ ಕೆಲವು ಅಂಶಗಳನ್ನು ಪಡೆಯಲಾಗಿದ್ದು ಕೆಮಿಕಲ್ ಪರೀಕ್ಷೆಗೆ ಕಳಿಸಲಾಗಿದೆ.
* ಸತತ ಮೂರು ಗಂಟೆಗಳ ಕಾಲ ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಪೆರುಂಬವೂರ್ ನಲ್ಲಿ ಜಿಶಾ ಅಂತ್ಯಕ್ರಿಯೆ ನಡೆಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com