ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತನ ಹತ್ಯೆ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ದುಷ್ಕರ್ಮಿಗಳು ಸಾಮಾಜಿಕ ಕಾರ್ಯಕರ್ತನೋಬ್ಬನನ್ನು ಹತ್ಯೆ ಮಾಡಿದ್ದಾರೆ.
ಕರಾಚಿಯಲ್ಲಿ ಹತ್ಯೆ ನಡೆದಿದ್ದು, ಮೃತರನ್ನು ಖುರ್ರಮ್ ಝಾಕಿ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ಅನಾಮಿಕ ವ್ಯಕ್ತಿಗಳು ರೆಸ್ಟೋರೆಂಟ್ ನಲ್ಲಿ ಊಟ ಮಾಡುತ್ತಿದ್ದ ಖುರ್ರಮ್ ಝಾಕಿ ಅವರತ್ತ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಸಾಮಾಜಿಕ ಕಾರ್ಯಕರ್ತ ಝಾಕಿ ಮೃತಪಟ್ಟಿದ್ದರೆ ಪತ್ರಕರ್ತ ರಾವ್ ಖಾಲಿದ್ ಹಾಗೂ ರೆಸ್ಟೋರೆಂಟ್ ನಲ್ಲಿದ್ದ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಮಾಜಿ ಪತ್ರಕರ್ತರಾಗಿದ್ದ ಝಾಕಿ, ಮಾನವಹಕ್ಕುಗಳ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದರೊಂದಿಗೆ ಫೇಸ್ ಬುಕ್ ನಲ್ಲಿ ಲೆಟ್ ಅಸ್ ಬಿಲ್ಡ್ ಪಾಕಿಸ್ತಾನ್ ಎಂಬ ಪೇಜ್ ನ್ನೂ ನಿರ್ವಹಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಝಾಕಿ ಉದಾರ ಧಾರ್ಮಿಕ ದೃಷ್ಟಿಕೋನಗಳನ್ನು ಬೆಂಬಲಿಸುತ್ತಿದ್ದರು ಹಾಗೂ ಎಲ್ಲಾ ರೀತಿಯ ತೀವ್ರವಾದಗಳನ್ನು ಖಂಡಿಸುತ್ತಿದ್ದರು. ಇದೇ ಕಾರಣಕ್ಕಾಗಿ ಝಾಕಿ ಅವರ ವೆಬ್ ಸೈಟ್ ನ್ನೂ ಪಾಕಿಸ್ತಾನದಲ್ಲಿ ನಿಷೇಧಿಸಲಾಗಿತ್ತು. ತೀವ್ರವಾದವನ್ನು ಖಂಡಿಸಿ, ಧಾರ್ಮಿಕ ದೃಷ್ಟಿಕೋನಗಳನ್ನು ಬೆಂಬಲಿಸುತ್ತಿದ್ದ ಕಾರಣ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ