
ನವದೆಹಲಿ: ಅಗಸ್ತಾ ವೆಸ್ಟ್ಲ್ಯಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ನಲ್ಲಿ ಕಾಂಗ್ರೆಸ್ ವಿರುದ್ಧ ಭಾರಿ ವಾಗ್ದಾಳಿ ನಡೆಸಿದ್ದ ಬಿಜೆಪಿ, ಇದೀಗ ರಾಬರ್ಟ್ ವಾದ್ರಾ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.
ಬಿಜೆಪಿ ಸಂಸದ ಕಿರೀಟ್ ಸೋಮಯ್ಯ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಕೇಳಿ ಬಂದಿರುವ ಅಕ್ರಮಗಳ ಬಗ್ಗೆ ಸಂಸತ್ನಲ್ಲಿ ಸೋಮವಾರ ವಿಷಯ ಮಂಡಿಸಲು ಅನುಮತಿ ಕೋರಿ ಲೋಕಸಭೆ ಸ್ಪೀಕರ್ಗೆ ಮನವಿ ಮಾಡಿದ್ದಾರೆ.
ರಾಬರ್ಟ್ ವಾದ್ರಾ ಒಡೆತನದ ಅಲ್ಲಿಜೆನಿ ಫಿನ್ಲೀಸ್ ಪ್ರೈ. ಲಿ ಹಾಗೂ ಸ್ಕೈಲೈಟ್ ಹಾಸ್ಪಿಟಾಲಿಟಿ ಸಂಸ್ಥೆಯಲ್ಲೂ ಸಾಕಷ್ಟು ಅಕ್ರಮ ನಡೆದಿದೆ. ಈಗಾಗಲೇ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಈ ಬಗ್ಗೆ 100 ಪುಟಗಳ ವಿವರ ಸಲ್ಲಿಸಿದ್ದೇನೆ ಎಂದು ಸಂಸದ ಸೋಮಯ್ಯ ತಿಳಿಸಿದ್ದಾರೆ.
2009ರಿಂದ 2011ರ ವರೆಗೆ ಬಿಕಾನೇರ್ನಲ್ಲಿ 1400 ಎಕರೆ ಭೂಮಿಯನ್ನು ಏಳು ಕಂಪನಿಗಳಿಗೆ ಹಂಚಿಕೆ ಮಾಡಲಾಗಿದ್ದು, ಈ ಪೈಕಿ ವಾದ್ರಾ ಜತೆ ಸಂಪರ್ಕ ಹೊಂದಿರುವ ಸ್ಕೈಲೈಟ್ ಹಾಸ್ಪಿಟಾಲಿಟಿ ಕೂಡ ಒಂದಾಗಿತ್ತು.
Advertisement