ಮೋದಿಯವರ ಪದವಿ ದಾಖಲೆ ಪರಿಶೀಲಿಸಲು ದೆಹಲಿ ವಿವಿಗೆ ಭೇಟಿ ನೀಡಲಿರುವ ಆಪ್ ನಾಯಕರು

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪದವಿಗೆ ಸಂಬಂಧಪಟ್ಟಂತೆ ಬಿಜೆಪಿ ಮತ್ತು ಆಪ್ ನಾಯಕರ ನಡುವೆ ಸಮರ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪದವಿಗೆ ಸಂಬಂಧಪಟ್ಟಂತೆ ಬಿಜೆಪಿ ಮತ್ತು ಆಪ್ ನಾಯಕರ ನಡುವೆ ಸಮರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ.ನಿನ್ನೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಸಚಿವ ಅರುಣ್ ಜೇಟ್ಲಿ ಸುದ್ದಿಗೋಷ್ಠಿ ನಡೆಸಿ, ಮೋದಿಯವರ ಬಿ.ಎ ಮತ್ತು ಎಂ.ಎ ಪದವಿಯ ಪ್ರಮಾಣಪತ್ರಗಳನ್ನು ಪ್ರದರ್ಶಿಸಿದ್ದರು. ಆದರೆ ಆ ಪ್ರಮಾಣಪತ್ರಗಳು ನಕಲಿ ಎಂದು ಆಪ್ ನಾಯಕರು ಆರೋಪಿಸುತ್ತಿದ್ದಾರೆ.

ಮೋದಿಯವರ ಬಿ.ಎ ಅಂಕಪಟ್ಟಿಯಲ್ಲಿ ಅವರ ಹೆಸರು ನರೇಂದ್ರ ಕುಮಾರ್ ದಾಮೋದರ್ ದಾಸ್ ಮೋದಿ ಎಂದು ಮತ್ತು ಎಂ.ಎ ಅಂಕಪಟ್ಟಿಯಲ್ಲಿ ನರೇಂದ್ರ ದಾಮೋದರ್ ದಾಸ್ ಮೋದಿ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ಇದು ನಕಲಿ ಅಂಕಪಟ್ಟಿ ಎಂದು ಗುರುತಿಸಿ  ಇಂದು ದೆಹಲಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಮೋದಿಯವರ ಅಂಕಪಟ್ಟಿಯನ್ನು ಪರಿಶೀಲಿಸಲು ಆಪ್ ಮುಖಂಡರು ತೀರ್ಮಾನಿಸಿದ್ದಾರೆ. ಜೊತೆಗೆ ತಮ್ಮ ಜೊತೆ ಬರುವಂತೆ ಅಮಿತ್ ಶಾ ಮತ್ತು ಅರುಣ್ ಜೇಟ್ಲಿಯವರಿಗೂ ಆಹ್ವಾನ ನೀಡಿದ್ದಾರೆ.

ಮೋದಿಯವರ ಪದವಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನುತೋರಿಸಲು ಕೇಂದ್ರ ಮಾಹಿತಿ ಆಯೋಗದ ಆದೇಶವಿರುವಾಗ ದೆಹಲಿ ವಿವಿಯಲ್ಲಿರುವ ದಾಖಲೆಗಳನ್ನು ಏಕೆ ಸೀಲ್ ಮಾಡಲಾಗಿದೆ? ಸಂದೇಹಗಳನ್ನು ಬಗೆಹರಿಸಲು ದಾಖಲೆಗಳನ್ನು ಬಿಡುಗಡೆ ಮಾಡಲು ಭಯ ಏಕೆ ಎಂದು ಆಶ್ ತೋಷ್ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com