100 ವರ್ಷಗಳ ಹಳೆಯ ಒಡಿಯಾನ್ ಕಂಪೆನಿಯಿಂದ ಶಾಸ್ತ್ರೀಯ ಸಂಗೀತ ಸಂಗ್ರಹಣೆ ಬಿಡುಗಡೆ

ಶಾಸ್ತ್ರೀಯ ಸಂಗೀತ ಪ್ರಿಯರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ನೀವು ಹಳೆಯ ಶಾಸ್ತ್ರೀಯ ಸಂಗೀತ ಕೇಳಲು...
ಒಡಿಯಾನ್ ಕಂಪೆನಿಯ ಸಿಡಿ, ಬಲಚಿತ್ರದಲ್ಲಿ ಎಂ.ಎಸ್.ಸುಬ್ಬಲಕ್ಷ್ಮಿ
ಒಡಿಯಾನ್ ಕಂಪೆನಿಯ ಸಿಡಿ, ಬಲಚಿತ್ರದಲ್ಲಿ ಎಂ.ಎಸ್.ಸುಬ್ಬಲಕ್ಷ್ಮಿ

ನವದೆಹಲಿ: ಶಾಸ್ತ್ರೀಯ ಸಂಗೀತ ಪ್ರಿಯರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ನೀವು ಹಳೆಯ ಶಾಸ್ತ್ರೀಯ ಸಂಗೀತ ಕೇಳಲು ಇಚ್ಛಿಸುತ್ತೀರಿ ಎಂದಾದರೆ ಬ್ರಿಟಿಷ್ ಲೈಬ್ರೆರಿಯ ವೆಬ್ ಸೈಟ್ ಗೆ ಲಾಗಿನ್ ಆಗಿ. ಒಡಿಯನ್ ರೆಕಾರ್ಡ್ ಕಂಪೆನಿಯ ಸಂಗ್ರಹಣೆಯಲ್ಲಿ 20ನೇ ಶತಮಾನದ ಸಾವಿರದ 200ಕ್ಕೂ ಹೆಚ್ಚು ಹಾಡುಗಳನ್ನು ಅಪ್ ಲೋಡ್ ಮಾಡಲಾಗಿದೆ. ಮತ್ತು ಯಂಗ್ ಇಂಡಿಯಾ ರೆಕಾರ್ಡ್ಸ್ ಕಂಪೆನಿಯ ಸಂಗ್ರಹಣೆಯಲ್ಲಿ ಸಾವಿರಕ್ಕೂ ಸಂಗೀತಗಳನ್ನು ಸೇರಿಸಲಾಗಿದೆ.

ಒಡಿಯನ್ ಶೆಲ್ಲಾಕ್ ಡಿಸ್ಕ್ 1912ರಿಂದ 1938ರವರೆಗೆ ಭಾರತದಲ್ಲಿ ಬಿಡುಗಡೆ ಮಾಡಿರುವ ಶಾಸ್ತ್ರೀಯ ಸಂಗೀತಗಳ ಸಂಗ್ರಹಣೆಗಳನ್ನು ಗ್ರಂಥಾಲಯ ಡಿಜಿಟಲ್ ಆವೃತ್ತಿಗಳನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದೆ. ಇವುಗಳಲ್ಲಿ ಹೆಚ್ಚಿನವು ಹೊರಗೆ ಮಾರುಕಟ್ಟೆಗಳಲ್ಲಿ ಸಿಗುವುದಿಲ್ಲ.

ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತಗಳ 2ಸಾವಿರಕ್ಕೂ ಹೆಚ್ಚು ಶಿರೋನಾಮೆಗಳನ್ನು ಒಡಿಯನ್ ಕಂಪೆನಿ ತಯಾರು ಮಾಡಿದ್ದು, ಅವುಗಳಲ್ಲಿ 600 ಉಳಿದುಕೊಂಡಿವೆ ಮತ್ತು ಅವುಗಳು ಖಾಸಗಿ ಸಂಗ್ರಹಕಾರರಲ್ಲಿವೆ. 200 ವರ್ಷಗಳ ಕರ್ನಾಟಕ ಸಂಗೀತ ಸಂಪ್ರದಾಯಗಳಲ್ಲಿ ಇದೊಂದೇ ಉಪಲಬ್ಧ ಆವೃತ್ತಿ ಆಗಿರುವುದರಿಂದ ಈ ಸಂಗ್ರಹಣೆ ಮುಖ್ಯವಾಗಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com