
ಡೆಹ್ರಾಡೂನ್: ಬಹುಮತ ಸಾಬೀತುಪಡಿಸಿ ಉತ್ತರಾಖಾಂಡ್ ಮುಖ್ಯಮಂತ್ರಿಯಾಗಿ ಹಿಂದಿರುಗಲಿರುವ ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಕೇಂದ್ರ ಸರ್ಕಾರದ ಬಗ್ಗೆ ಯಾವುದೇ ಕೆಟ್ಟ ಭಾವನೆ ಇಲ್ಲ ಎಂದು ಬುಧವಾರ ಹೇಳಿದ್ದು, ರಾಜ್ಯದ ಪ್ರಗತಿಗೆ ಕೇಂದ್ರದ ಸಹಕಾರ ಬೇಕೆಂದಿದ್ದಾರೆ.
"ಅನಿಶ್ಚಿತತೆ ಮತ್ತು ರಾಜ್ಯ ಸಾಕಷ್ಟು ಸಮಯ ಕಳೆದುಕೊಂಡ ಈ ಅವಧಿ ಉದ್ವೇಗದಿಂದ ಕೂಡಿತ್ತು. ಆದರೆ ಎಲ್ಲವೂ ಸರಿಯಾಗಿ ಅಂತ್ಯವಾಗಿದೆ" ಎಂದು ಸುಪ್ರೀಮ್ ಕೋರ್ಟ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಳಿಸಿದ ನಂತರ ವರದಿಗಾರರಿಗೆ ರಾವತ್ ತಿಳಿಸಿದ್ದಾರೆ.
"ಈಗ ಇದು ಮುಗಿದ ಅಧ್ಯಾಯ" ಎಂದಿರುವ ರಾವತ್. ರಾಷ್ಟ್ರಪತಿ ಆಳ್ವಿಕೆಯನ್ನು ಹಿಂತೆಗೆದುಕೊಳ್ಳುತ್ತಿರುವುದನ್ನು ಸುಪ್ರೀಂ ಕೋರ್ಟ್ ಗೆ ತಿಳಿಸಿರುವ ತಿಳಿಸಿರುವ ಕೇಂದ್ರ ಸರ್ಕಾರ ಮತ್ತು ಅಟಾರ್ನಿ ಜನರಲ್ ಮುಕುಲ್ ರೋಹತ್ಗಿ ನಡೆಯನ್ನು ಗೌರಪವಪೂರ್ಣ ಎಂದು ಕರೆದಿದ್ದಾರೆ.
"ನಮಗೆ ಕೇಂದ್ರ ಸರ್ಕಾರದ ಬೆಂಬಲ ಅಗತ್ಯವಿದೆ. ನಮ್ಮದು ಸಣ್ಣ ರಾಜ್ಯ ಆದರೆ ಗುರಿ ದೊಡ್ಡದು" ಎಂದು ಸಂತಸದಿಂದಿದ್ದ ರಾವತ್ ಹೇಳಿದ್ದಾರೆ.
ಬಹುಮತ ಸಾಬೀತು ಪಡಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದ್ದು "ಭಾರತದ ಕಾನೂನು ವ್ಯವಸ್ಥೆ ಮತ್ತು ಸಂವಿಧಾನ ಮೌಲ್ಯಗಳಲ್ಲಿ ಜನರ ನಂಬಿಕೆ ಹೆಚ್ಚಿಸಿದೆ" ಎಂದು ಕೂಡ ಅವರು ಹೇಳಿದ್ದಾರೆ.
Advertisement