
ನವದೆಹಲಿ: ಮೇ 16ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣಾ ಕಣದಲ್ಲಿ 202 ಕೋಟ್ಯಾಧಿಪತಿಗಳು ಇದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನಡೆಸಿದ ಸಮೀಕ್ಷೆಯಲ್ಲಿ‘ಒಟ್ಟು 1,125 ಅಭ್ಯರ್ಥಿಗಳ ಪೈಕಿ 202 ಜನರು ಕೋಟ್ಯಾಧಿಪತಿಗಳು. ಕಾಂಗ್ರೆಸ್‌ನ 43, ಸಿಪಿಎಂನ 24, ಬಿಜೆಪಿಯ 18, ಭಾರತ್ ಧರ್ಮ ಜನಸೇನೆಯ 18, ಐಯುಎಂಎಲ್‌ನ 19, ಕೇರಳ ಕಾಂಗ್ರೆಸ್‌ನ 9, ಎಐಎಡಿಎಂಕೆಯ ಇಬ್ಬರು ಹಾಗೂ 30 ಪಕ್ಷೇತರ ಅಭ್ಯರ್ಥಿಗಳು ತಮ್ಮ ಆಸ್ತಿಯನ್ನು 1 ಕೋಟಿಗೂ ಹೆಚ್ಚಿದೆ ಎಂದು ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.
‘ಒಟ್ಟು 1,125 ಅಭ್ಯರ್ಥಿಗಳ ಪೈಕಿ, 311 ಜನರು ತಮ್ಮ ವಿರುದ್ಧದ ಅಪರಾಧ ಪ್ರಕರಣಗಳನ್ನು ಸ್ವಯಂ ಘೋಷಿಸಿಕೊಂಡಿದ್ದಾರೆ. ಒಟ್ಟು 496 ಹುರಿಯಾಳುಗಳು ಪ್ಯಾನ್ ವಿವರ ನೀಡಿಲ್ಲ. 834 ಸ್ಪರ್ಧಿಗಳು ಆದಾಯ ತೆರಿಗೆ ವಿವರ ನೀಡಿಲ್ಲ’ ಎಂದೂ ಹೇಳಿದೆ.
ಒಟ್ಟು 699 ಅಭ್ಯರ್ಥಿಗಳು 5 ರಿಂದ 12 ತರಗತಿ ಶಿಕ್ಷಣವನ್ನು ಘೋಷಿಸಿಕೊಂಡಿದ್ದಾರೆ. 380 ಜನರು ಪದವಿ ಅಥವಾ ಅದಕ್ಕೂ ಮೇಲ್ಪಟ್ಟ ಶಿಕ್ಷಣ ಎಂದು ಹೇಳಿಕೊಂಡಿದ್ದಾರೆ.
Advertisement