ಸರ್ಕಾರದ ನೀತಿ, ನಿಷ್ಕ್ರಿಯತೆ ಖಂಡಿಸಿ ಜು.29 ರಿಂದ ಬ್ಯಾಂಕರ್ ಗಳ ಮುಷ್ಕರ

ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಕೆಲವೊಂದು ವಿಷಯದಲ್ಲಿ ನಿಷ್ಕ್ರಿಯತೆಯನ್ನು ಖಂಡಿಸಿ 10 ಲಕ್ಷ ಬ್ಯಾಂಕರ್ ಗಳು ಜುಲೈ.29 ರಿಂದ ಮುಷ್ಕರ
ಬ್ಯಾಂಕರ್ ಗಳ ಮುಷ್ಕರ (ಸಂಗ್ರಹ ಚಿತ್ರ)
ಬ್ಯಾಂಕರ್ ಗಳ ಮುಷ್ಕರ (ಸಂಗ್ರಹ ಚಿತ್ರ)

ಚೆನ್ನೈ: ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಕೆಲವೊಂದು ವಿಷಯದಲ್ಲಿ ನಿಷ್ಕ್ರಿಯತೆಯನ್ನು ಖಂಡಿಸಿ 10 ಲಕ್ಷ ಬ್ಯಾಂಕರ್ ಗಳು ಜುಲೈ.29 ರಿಂದ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಖಿಲ ಭಾರತೀಯ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿಹೆಚ್ ವೆಂಕಟಾಚಾಲಂ ತಿಳಿಸಿದ್ದಾರೆ. ಬ್ಯಾಂಕಿಂಗ್ ಸೆಕ್ಟರ್ ನ ಬ್ಯಾಡ್ ಲೋನ್‌ 10 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿರುವುದು ಕಾರ್ಪೊರೇಟ್ ವಲಯದವರೇ ಆಗಿದ್ದು, ಬಾಕಿ ಇರುವ ಹಣ ವಸೂಲಿ ಮಾಡಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವೆಂಕಟಾಚಲಂ ಹೇಳಿದ್ದಾರೆ. 
ಬ್ಯಾಂಕ್ ಗಳ ಆದಾಯದಲ್ಲಿ ಬ್ಯಾಡ್ ಲೋನ್ ಗಳನ್ನು ನೀಡಲಾಗುತ್ತಿದೆ ಅಥವಾ ವಜಾಗೊಳಿಸಲಾಗುತ್ತಿದೆ ಪರಿಣಾಮವಾಗಿ ನಷ್ಟ ಉಂಟಾಗುತ್ತಿದೆ ಎಂದಿರುವ ಸಿಹೆಚ್ ವೆಂಕಟಾಚಲಂ, ಸುಸ್ತಿದಾರರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. 7 ,000 ಉದ್ದೇಶಿತ ಸುಸ್ತಿದಾರರಿದ್ದು ಇವರಿಂದ 60 ,000 ಕೋಟಿ ಬಾಕಿ ಹಣ ವಸೂಲಿ ಆಗಬೇಕಿದೆ ಎಂದು ವೆಂಕಟಾಚಲಂ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com