
ನವದೆಹಲಿ: ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಒಪ್ಪಂದ ಕುದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನಾನು ಯಾವತ್ತೂ ಭೇಟಿಯಾಗಿಲ್ಲ ಎಂದು ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಹೇಳಿದ್ದಾರೆ.
ಖಾಸಗಿ ಆಂಗ್ಲ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಒಪ್ಪಂದ ಕುದುರಿಸುವ ಸಂಬಂಧ ಗಾಂಧಿ, ಸಿಂಗ್ ಇಲ್ಲವೇ ಆಗಿನ ರಕ್ಷಣಾ ಸಚಿವ ಎ.ಕೆ.ಆಂಟಿನಿ ಅವರೊಟ್ಟಿಗೆ ಭೇಟಿ ನಡೆದಿತ್ತೇ ಎಂಬ ಪ್ರಶ್ನೆಗೆ ‘ಇಲ್ಲ, ಎಂದಿಗೂ ಇಲ್ಲ. ಇವರಲ್ಲಿ ಯಾರೊಬ್ಬರನ್ನೂ ಎಂದೂ ನಾನು ಭೇಟಿಯಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಕಿಕ್‌ಬ್ಯಾಕ್ ಹಗರಣದಿಂದ ತಮ್ಮ ಹೆಸರನ್ನು ಕೈಬಿಡುವಂತೆ ಕೋರಿದ ಅವರು, ಭಾರತೀಯ ವಾಯು ಪಡೆಯ ಆಗಿನ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರ ಕೈಯನ್ನೊಮ್ಮೆ ಕುಲುಕಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.
Advertisement