
ಡೆಹ್ರಾಡೂನ್: ಉತ್ತರಾಖಾಂಡ್ ನಲ್ಲಿ ರಾಷ್ಟ್ರಪತಿ ಆಳ್ವಿಕೆ ತೆರವುಗೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಹಿಂದಿರುಗಿದುವ ಹರೀಶ್ ರಾವತ್ ಇಂದು ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಹರೀಶ್ ರಾವತ್ ಈ ಹಿಂದೆ ತೆಗೆದುಕೊಂಡು ನಿರ್ಣಯಗಳ ಮತ್ತು ಸರ್ಕಾರಿ ಆದೇಶಗಳ ಶೀಘ್ರ ಅನುಷ್ಟಾನಕ್ಕೆ ನಿರ್ಧರಿಸಿದ್ದಾರೆ.
ರಾವತ್ ಬಹುಮತ ಸಾಬೀತುಪಡಿಸಿದ ನಂತರ ನೆನ್ನೆಯಷ್ಟೇ ಉತ್ತರಾಖಾಂಡ್ ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರ ಕೋರ್ಟ್ ಗೆ ತಿಳಿಸಿತ್ತು. ಸೆಕ್ರೆಟೆರಿಯಟ್ ನಲ್ಲಿ ಈ ಬೆಳಗ್ಗೆ ನಡೆದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ತಿಳಿಸಿದ ಮಾಹಿತಿ ಸಚಿವಾಲಯ, ಹಿಂದೆ ತೆಗೆದುಕೊಂಡ ನಿರ್ಣಯಗಳು ಮತ್ತು ಸರ್ಕಾರಿ ಆದೇಶಗಳ ಶೀಘ್ರ ಅನುಷ್ಠಾನಕ್ಕೆ ನಿಶ್ಚಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಪುಟ ಸಭೆಯ ನಂತರ ೧೨:೩೦ ಕ್ಕೆ ರಾವತ್ ನೀಡಬೇಕಾಗಿದ್ದ ಪತ್ರಿಕಾ ಗೋಷ್ಠಿಯನ್ನು ರದ್ದುಪಡಿಸಿದ್ದು, ರಾಜಕೀಯ ಅನಿಶ್ಚಿಯತೆಯಿಂದ ರಾಜ್ಯ ಬಹಳಷ್ಟು ಸಮಯ ಕಳೆದುಕೊಂಡಿದ್ದು, ಅದನ್ನು ಸರಿಪಡಿಸಲು ಹೆಚ್ಚು ಕೆಲಸ ಮಾಡುವ ಭರವಸೆ ನೀಡಿದ್ದಾರೆ.
೪೬ ದಿನಗಳವರೆಗೆ ಮುಖ್ಯಮಂತ್ರಿ ಸ್ಥಾನದಿಂದ ಹೊರದಬ್ಬಲಾಗಿದ್ದ ಹರೀಶ್ ರಾವತ್ ನೆನ್ನೆಯಷ್ಟೇ ಮತ್ತೆ ಸ್ಥಾನವನ್ನು ಅಲಂಕರಿಸಿದ್ದಾರೆ.
Advertisement