2 ವರ್ಷದಲ್ಲಿ ಸ್ಟ್ಯಾಚ್ಯೂ ಆಫ್ ಯೂನಿಟಿ ಪೂರ್ಣ: ಶಿಲ್ಪಿ ಸುತಾರ್

ವಿಶ್ವದ ಅತಿ ಎತ್ತರದ ಸ್ಮಾರಕ ಎಂಬ ಖ್ಯಾತಿಗೆ ಭಾಜನವಾಗಲಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಸ್ಮಾರಕವನ್ನು ಇನ್ನು ಎರಡು ವರ್ಷಗಳಲ್ಲಿ...
ಸರ್ದಾರ್ ವಲ್ಲಭಬಾಯಿ ಪಟೇಲ್
ಸರ್ದಾರ್ ವಲ್ಲಭಬಾಯಿ ಪಟೇಲ್

ನವದೆಹಲಿ: ವಿಶ್ವದ ಅತಿ ಎತ್ತರದ ಸ್ಮಾರಕ ಎಂಬ ಖ್ಯಾತಿಗೆ ಭಾಜನವಾಗಲಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಸ್ಮಾರಕವನ್ನು ಇನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಪದ್ಮಶ್ರೀ ಪುರಸ್ಕೃತ ಶಿಲ್ಪಿ ರಾಮ್ ವಿ ಸುತಾರ್ ಹೇಳಿದ್ದಾರೆ.

ಮಧ್ಯಪ್ರದೇಶದ ಗಾಂಧೀ ಸಾಗರ್ ಡ್ಯಾಂನಲ್ಲಿ ನಿರ್ಮಿಸಲಾಗಿರುವ ಚಂಬಲ್ ಸ್ಮಾರಕದ ಶಿಲ್ಪಿ 91ರ ವರ್ಷದ ಸುತಾರ್ ಅವರನ್ನೇ ನರ್ಮದಾ ನದಿ ದಡದಲ್ಲಿ ನಿರ್ಮಿಸಲಾಗುತ್ತಿರುವ ಸ್ಟ್ಯಾಚ್ಯೂ ಆಫ್ ಯೂನಿಟಿ ಸ್ಮಾರಕದ ಶಿಲ್ಪ ರಚನೆಗೆ ಗುಜರಾತ್ ಸರ್ಕಾರ 2014ರಲ್ಲಿ ಆಯ್ಕೆ ಮಾಡಿತ್ತು.

ಗುಜರಾತ್ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ನೇತೃತ್ವದಲ್ಲಿ
ದೇಶದ ಪ್ರಥಮ ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 522 ಅಡಿ ಎತ್ತರದ ಕಂಚಿನ ಸ್ಮಾರಕ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಅಂತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 522 ಅಡಿ ಎತ್ತರದ ಈ ಸ್ಮಾರಕಕ್ಕೆ 1600 ಟನ್ ಉಕ್ಕು ಬೇಕಾಗುತ್ತದೆ.

ಇನ್ನು ಪಟೇಲರ ಸ್ಮಾರಕವನ್ನು ಚೀನಾ ನಿರ್ಮಿಸಲಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಸುತಾರ್ ಅವರು ಇದೊಂದು ದೊಡ್ಡ ಸ್ಮಾರಕ ಇದನ್ನು ಸ್ಮಾರಕ ಸ್ಥಾಪನೆ ಮಾಡುವ ಸ್ಥಳದಲ್ಲೇ ನಿರ್ಮಿಸಬೇಕಾಗಿದೆ. ಇದರ ಮೇಲ್ವಿಚಾರಣೆಯನ್ನು ನಾನೇ ನೋಡಿಕೊಳ್ಳುತ್ತಿದ್ದು ಸಂಪೂರ್ಣ ಮೇಕ್ ಇನ್ ಇಂಡಿಯಾ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com