ದರ್ಗಾ ಪ್ರವೇಶಿಸಿದ ತೃಪ್ತಿ ದೇಸಾಯಿ, ಮಹಿಳೆಯರಿಗೆ ನಿಷೇಧ ಹೇರಿದ್ರೆ ಪ್ರತಿಭಟನೆಯ ಎಚ್ಚರಿಕೆ

ಅಹಮ್ಮದನಗರದ ಶನಿ ಶಿಂಗ್ನಾಪುರ ಹಾಗೂ ನಾಶಿಕ್ ನ ತ್ರೈಂಬಕೇಶ್ವರ ಶಿವ ದೇವಾಲಯಗಳಿಗೆ ಮಹಿಳಾ ಪ್ರವೇಶಾತಿ ಆಗ್ರಹಿಸಿ ಹೋರಾಟ ನಡೆಸಿ ಯಶಸ್ವಿಯಾಗಿದ್ದ...
ತೃಪ್ತಿ ದೇಸಾಯಿ
ತೃಪ್ತಿ ದೇಸಾಯಿ
ಮುಂಬೈ: ಅಹಮ್ಮದನಗರದ ಶನಿ ಶಿಂಗ್ನಾಪುರ ಹಾಗೂ ನಾಶಿಕ್ ನ ತ್ರೈಂಬಕೇಶ್ವರ ಶಿವ ದೇವಾಲಯಗಳಿಗೆ ಮಹಿಳಾ ಪ್ರವೇಶಾತಿಗೆ ಆಗ್ರಹಿಸಿ ಹೋರಾಟ ನಡೆಸಿ ಯಶಸ್ವಿಯಾಗಿದ್ದ ಭೂಮಾತಾ ಬ್ರಿಗೇಡ್ ಸಂಘಟನೆ ಮುಖ್ಯಸ್ಥೆ ತೃಪ್ತಿ ದೇಸಾಯಿ ಗುರುವಾರ ಮುಂಬೈನ ಹಜಿ ಅಲಿ ದರ್ಗಾ ಪ್ರವೇಶಿಸಿದ್ದಾರೆ.
ತೃಪ್ತಿ ದೇಸಾಯಿ ಇಂದು ಬೆಳಗ್ಗೆ ದರ್ಗಾ ಪ್ರವೇಶಿಸಿ ಪಾರ್ಥನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರಿಗೆ ಪೊಲೀಸರು ಭದ್ರತೆ ನೀಡಿದ್ದರು. ಆದರೆ ಮಹಿಳೆಯರಿಗೆ ದರ್ಗಾದಲ್ಲಿನ ಮಝುರ್ ( ಗರ್ಭಗುಡಿ) ಪ್ರವೇಶವನ್ನು ನಿರಾಕರಿಸಲಾಯಿತು.
ದರ್ಗಾ ಪ್ರವೇಶಿಸಿದ ನಂತರ ಮಾತನಾಡಿದ ತೃಪ್ತಿ ದೇಸಾಯಿ, ಈ ಪ್ರವೇಶಾತಿಯಿಂದ ನಮಗೆ ಜಯ ದೊರಕಿದೆ. ಇನ್ನು ಹದಿನೈದು ದಿನಗಳೊಳಗೆ ಮಝುರ್ ಪ್ರವೇಶ ಕಾರ್ಯ ಕೈಗೊಳ್ಳಲಿದ್ದು, ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಸವಾಲು ಹಾಕಿದರು. ಅಲ್ಲದೆ ಒಂದು ವೇಳೆ ಮಝರ್ ಪ್ರವೇಶಕ್ಕೆ ನಿಷೇಧ ಹೇರಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಕಳೆದ ಏಪ್ರಿಲ್​ನಲ್ಲಿ ಭೂಮಾತಾ ಬ್ರಿಗೇಡ್ ಸಂಘಟನೆ ಮಹಿಳೆಯರು ದರ್ಗಾ ಪ್ರವೇಶಕ್ಕೆ ಮುಂದಾದಾಗ ಸ್ಥಳೀಯ ಮುಖಂಡರು ಇದನ್ನು ವಿರೋಧಿಸಿ, ಜೀವ ಬೆದರಿಕೆ ಹಾಕಿದ್ದರು. ಆದರೆ ಇದನ್ನು ಲೆಕ್ಕಿಸದೆ ಹಜ್ ಎಲ್ಲರ ಆಸ್ತಿ ಎಂಬ ಘೊಷಣೆಯೊಂದಿಗೆ ತೃಪ್ತಿ ಅವರು ಹೋರಾಟ ನಡೆಸಿದರು. ಈ ಕಾರ್ಯಕ್ಕೆ ಮುಸ್ಲಿಂ ಮಹಿಳೆಯರೂ ಕೂಡ ಕೈ ಜೋಡಿಸಿರುವುದು ಗಮನಾರ್ಹ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com