
ಉಜ್ಜೈನಿ: ಉಜ್ಜೈನಿಯಲ್ಲಿ ನಡೆಯುತ್ತಿರುವ ಸಿಂಹಸ್ಥ ಕುಂಭಮೇಳದ ಭಾಗವಾಗಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸಂಸ್ಕೃತಿಯನ್ನು ಹೊಗಳಿದ್ದು, ತ್ಯಾಗ, ಏಕೀಕರಣ, ಹಾಗೂ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ತತ್ವಗಳು ನಮ್ಮ ಸಂಸ್ಕೃತಿಯಲ್ಲಿ ಅಂತರ್ಗತವಾಗಿದೆ ಎಂದು ಹೇಳಿದ್ದಾರೆ.
ಭಿಕ್ಷುಕ ಸಹ ತನಗೆ ನಿದಿದಾವರಿಗೂ, ನೀಡದವರಿಗೂ ಒಳ್ಳೆಯದಾಗಲಿ ಎಂಬ ಸಂಸ್ಕೃತಿಗೆ ಸೇರಿದವರು ಹಾಗೂ ಮರ-ಗಿಡ, ನೀರಿನಲ್ಲಿಯೂ ಜೀವವನ್ನು ಕಾಣುವ ತತ್ವಜಾನಿಗಳು. ಇತರರ ಒಳಿತಿಗಾಗಿ ತ್ಯಾಗಕ್ಕೆ ಸಿದ್ಧರಾಗುವವರು ಭಾರತೀಯರು ಹಾಗಾಗಿಯೇ ತಮ್ಮ ಕರೆಗೆ ಓಗೊಟ್ಟು ಬಡವರಿಗಾಗಿ ಸಹಾಯ ಮಾಡಲು ಅದೆಷ್ಟೋ ಜನರು ಎಲ್ ಪಿಜಿ ಸಬ್ಸಿಡಿಯನ್ನು ಕೈಬಿಟ್ಟಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ "ನಿಮಗಿಂತಲೂ ಹೆಚ್ಚು ಪವಿತ್ರ" ಎಂಬ ಮನಸ್ಥಿತಿ ಹೆಚ್ಚುತ್ತಿದೆ. ನಮ್ಮಲ್ಲೇ ಬದಲಾವಣೆ ಮಾಡಿಕೊಂಡು ಅಭಿವೃಉದ್ಧಿಯಾಗುವತ್ತ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಸಿಂಹಸ್ಥ ಕುಂಭಮೇಳದ ಬಗ್ಗೆ ಮಾತನಾಡಿದ ಮೋದಿ, ಕುಂಭಮೇಳದಲ್ಲಿ ಘೋಷಣೆಯಾದ 51 ಪ್ರಮುಖ ಅಂಶಗಳು ಭಾರತದಲ್ಲಿ ಮಾತ್ರವಲ್ಲದೇ ಇಡಿ ವಿಶ್ವದಲ್ಲೇ ಹೊಸ ಭಾಷ್ಯ ಬರೆಯಲಿದೆ. ಇಲ್ಲಿ ನಡೆಯುತ್ತಿರುವ ಕುಂಭಮೇಳ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶ್ರೀಲಂಕಾ ಅಧ್ಯಕ್ಷರೂ ಸಹ ಸಿಂಹಾಸ್ಥ ಕುಂಭಮೇಳದ ಅಂಗವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
Advertisement