ಸಹೋದ್ಯೋಗಿಗೆ ಲೈಂಗಿಕ ಕಿರುಕುಳ: ದೆಹಲಿ ಕೋರ್ಟ್ ನಿಂದ ಪಚೌರಿಗೆ ಸಮನ್ಸ್

ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಇಂಧನ ಮತ್ತು ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮಾಜಿ ಮುಖ್ಯಸ್ಥ ಆರ್.ಕೆ.ಪಚೌರಿ...
ಆರ್.ಕೆ.ಪಚೌರಿ
ಆರ್.ಕೆ.ಪಚೌರಿ
ದೆಹಲಿ: ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಇಂಧನ ಮತ್ತು ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮಾಜಿ ಮುಖ್ಯಸ್ಥ ಆರ್.ಕೆ.ಪಚೌರಿ ಅವರಿಗೆ ದೆಹಲಿ ಕೋರ್ಟ್ ಶನಿವಾರ ಸಮನ್ಸ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಾರ್ಚ್ 1ರಂದು ನ್ಯಾಯಾಲಯಕ್ಕೆ 1,400 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ದೆಹಲಿ ಮೆಟ್ರೋಪಾಲಿಟಿನ್ ಕೋರ್ಟ್, ಪಚೌರಿ ವಿರುದ್ಧ ಸೆಕ್ಸೆನ್ 354 ಎ, 354ಬಿ, 354ಡಿ ಹಾಗೂ 341 ಮತ್ತು 509ರಡಿ ಕ್ರಮ ಕೈಗೊಳ್ಳಲು ಸಾಕಷ್ಟು ಸಾಕ್ಷ್ಯಗಳಿವೆ ಎಂದು ಹೇಳಿದೆ.
ಪ್ರಕರಣ ಸಂಬಂಧ ಒಟ್ಟು 23 ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದೆ ಇದರ ಜತೆಗೆ ಮೊಬೈಲ್ ಸಂದೇಶ, ಇ-ಮೇಲ್ ಹಾಗೂ ವಾಟ್ಸಾಫ್ ಸಂದೇಶಗಳ ಪರಿಶೀಲನೆ ನಡೆಸಲಾಗಿದೆ. ಎಲ್ಲ ಸಾಕ್ಷ್ಯಗಳೂ ಸಂತ್ರಸ್ತೆಯ ಆರೋಪಕ್ಕೆ ಬಲ ನೀಡುತ್ತಿದೆ. ಪಚೌರಿ ಅವರಿಂದ ಸಂತ್ರಸ್ತೆಗೆ ಲೈಂಗಿಕ ಕಿರುಕುಳ, ಉದ್ದೇಶ ಪೂರ್ವಕವಾಗಿ ಹಿಂಬಾಲಿಸಿರುವುದು, ಅನುಚಿತ ಸನ್ನೆ, ಬೆದರಿಕೆ ಹಾಕಿರುವುದು ಕಂಡು ಬಂದಿದೆ ಎಂದಿರುವ ನ್ಯಾಯಾಧೀಶೆ ಶಿವಾನಿ ಚೌಹ್ವಾಣ್ ಅವರು, ಹೆಚ್ಚಿನ ವಿಚಾರಣೆಗಾಗಿ ಆರೋಪಿ ಪಚೌರಿಗೆ ಸಮನ್ಸ್ ಜಾರಿ ಮಾಡಿ, ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದ್ದಾರೆ.
ಇಂಧನ ಮತ್ತು ಸಂಪನ್ಮೂಲ ಅಭಿವೃದ್ಧಿಿ ಇಲಾಖೆ ಕಾರ್ಯನಿರ್ವಹಕ ಅಧಿಕಾರಿ ಹಾಗೂ ವಿಶ್ವಸಂಸ್ಥೆೆ ಹವಾಮಾನ ವೈಪರೀತ್ಯ ಆಂತರಿಕ ಸಲಹಾ ಸಮಿತಿಯ ಮುಖ್ಯಸ್ಥರಾಗಿದ್ದ ಆರ್.ಕೆ.ಪಚೌರಿ ವಿರುದ್ಧ 2015ರಲ್ಲಿ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ಪಚೌರಿ ಅವರ ಲೈಂಗಿಕ ಕಿರುಕುಳದಿಂದ ಬೇಸತ್ತ ಮಹಿಳೆ ಕೆಲಸಕ್ಕೆೆ ರಾಜೀನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com