2019 ಕ್ಕೆ ಬಿಜೆಪಿ ವಿರುದ್ಧ ಮಹಾಮೈತ್ರಿಗೆ ಕರೆ ನೀಡಿದ ಎಡಪಕ್ಷ

2019 ರಲ್ಲಿ ಬಿಜೆಪಿಯನ್ನು ದೂರವಿಡುವುದಕ್ಕೆ ಬಿಜೆಪಿಯೇತರ ಪಕ್ಷಗಳು ಒಗ್ಗೂಡುವ ಐತಿಹಾಸಿಕ ಅವಶ್ಯಕತೆ ಇದೆ ಎಂದು ಸಿಪಿಐ ಮುಖಂಡ, ಪ್ರಧಾನ ಕಾರ್ಯದರ್ಶಿ ಸುರವರಂ ಸುಧಾಕರ್ ರೆಡ್ಡಿ ಕರೆ ನೀಡಿದ್ದಾರೆ.
ಸಿಪಿಐ
ಸಿಪಿಐ

ಹೈದರಾಬಾದ್: 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ದೂರವಿಡುವುದಕ್ಕೆ ಬಿಜೆಪಿಯೇತರ ಪಕ್ಷಗಳು ಒಗ್ಗೂಡುವ ಐತಿಹಾಸಿಕ ಅವಶ್ಯಕತೆ ಇದೆ ಎಂದು ಸಿಪಿಐ ಮುಖಂಡ, ಪ್ರಧಾನ ಕಾರ್ಯದರ್ಶಿ ಸುರವರಂ ಸುಧಾಕರ್ ರೆಡ್ಡಿ ಕರೆ ನೀಡಿದ್ದಾರೆ.
ಬಿಹಾರದಲ್ಲಿ ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರು ಮಹಾಮೈತ್ರಿ ರಚಿಸಿದ ಮಾದರಿಯಲ್ಲೇ 2019 ರ ವೇಳೆಗೆ ಕೇಂದ್ರದಲ್ಲೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಲ್ಲಾ ಪಕ್ಷಗಳು ಮೈತ್ರಿಗೆ ಮುಂದಾಗಬೇಕೆಂದು ಸುಧಾಕರ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆಯೂ ಇಂತಹ ಅನೇಕ ಮೈತ್ರಿಗಳು ರಚನೆಯಾಗಿದ್ದವು, ಮಾಜಿ ಪ್ರಧಾನಿ ದೇವೇಗೌಡ, ವಿಪಿ ಸಿಂಗ್ ನೇತೃತ್ವದಲ್ಲಿ ಈ ರೀತಿಯ ಮೈತ್ರಿಗಳು ಯಶಸ್ವಿಯಾಗಿದ್ದವು. ಹಲವು ಪಕ್ಷಗಳ ಒಕ್ಕೂಟ ಸಾರ್ವಕಾಲಿಕವಲ್ಲದಿದ್ದರೂ ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಸಹಕಾರಿಯಾಗಿತ್ತು. ಈಗ ಮತ್ತೊಮ್ಮೆ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಬಿಜೆಪಿಯೇತರ ಪಕ್ಷಗಳು ಒಗ್ಗೂಡಬೇಕಿದೆ ಎಂದು ಸುಧಾಕರ್ ರೆಡ್ಡಿ ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com