ರೈಲಿನಲ್ಲಿ ಊಟಕ್ಕಾಗಿ 'ಪ್ರೀ ಪೇಯ್ಡ್' ಆರ್ಡರ್ ಮಾಡಿದರೆ ಶೇ.50 ರಷ್ಟು ಕ್ಯಾಶ್ ಬ್ಯಾಕ್ ಆಫರ್!

ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಯಾಣಿಕ ಸ್ನೇಹಿ ಬದಲಾವಣೆಗಳನ್ನು ಕಾಣುತ್ತಿರುವ ರೈಲ್ವೆ ಇಲಾಖೆ, ಈಗ ಮತ್ತೊಂದು ವಿನೂತನ ಕೊಡುಗೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಯಾಣಿಕ ಸ್ನೇಹಿ ಬದಲಾವಣೆಗಳನ್ನು ಕಾಣುತ್ತಿರುವ ರೈಲ್ವೆ ಇಲಾಖೆ, ಈಗ ಮತ್ತೊಂದು ವಿನೂತನ ಕೊಡುಗೆ ನೀಡಿದೆ. ಇಲಾಖೆಯ ಇ-ಕೇಟರಿಂಗ್ ಸೌಲಭ್ಯದಡಿಯಲ್ಲಿ ಊಟ ಪಡೆಯಲು ಪ್ರೀ ಪೇಯ್ಡ್ ಆರ್ಡರ್ (ಮುಂಚಿತವಾಗಿಯೇ ಪಾವತಿ) ಮಾಡಿದರೆ ಶೇ.50 ರಷ್ಟು ಹಣ ವಾಪಸ್ ನೀಡುವ ಘೋಷಣೆ ಮಾಡಿದೆ.

ಶೇ.50 ರಷ್ಟು ಹಣ ವಾಪಸ್ ನೀಡುವ ಸೌಲಭ್ಯಕ್ಕೆ ಕೆಲವು ಷರತ್ತುಗಳು ಅನ್ವಯವಾಗಲಿದ್ದು ಒಂದೇ ಆರ್ಡರ್ ನಲ್ಲಿ ರೂ.300 ಕ್ಕಿಂತ ಹೆಚ್ಚು ಬೆಲೆಯ ಆಹಾರವನ್ನು ಪ್ರೀ ಪೇಯ್ಡ್  ಆರ್ಡರ್ ಮಾಡಿದರೆ ಮಾತ್ರ ಕ್ಯಾಶ್ ಬ್ಯಾಕ್ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ಮೇ.13 ರಿಂದಲೇ ಈ ವಿನೂತನ ಕೊಡುಗೆ ಜಾರಿಗೆ ಬಂದಿದ್ದು ಭಾರತಿಯ ರೈಲ್ವೆ ಕೇಟರಿಂಗ್ ಟೂರಿಸಂ ಕಾರ್ಪೋರೇಷನ್ ವೆಬ್ ಸೈಟ್ ಅಥವಾ ಫುಡ್ ಎನ್ ಟ್ರ್ಯಾಕ್ ಮೂಲಕ ಆರ್ಡರ್ ಮಾಡಿದರೆ ಮಾತ್ರ ಕ್ಯಾಶ್ ಬ್ಯಾಕ್ ಆಫರ್ ಸಿಗಲಿದ್ದು ಈ ರೀತಿಯ ಸೌಲಭ್ಯ ನೀಡುವುದರಿಂದ ಇ-ಕೇಟರಿಂಗ್ ವ್ಯವಸ್ಥೆ ಮತ್ತಷ್ಟು ಉತ್ತಮಗೊಳ್ಳಲಿದೆ  ಎಂದು ಐಆರ್ ಸಿಟಿಸಿಯ ಸಿಎಂಡಿ ಎಕೆ ಮನೋಚ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಹಾರ ಪದಾರ್ಥಗಳು ವಿತರಣೆಯದ ನಂತರ ಆರ್ಡರ್ ಮಾಡಲು ಬಳಕೆ ಮಾಡಿದ್ದ ಖಾತೆಗೆ ಶೇ.50 ರಷ್ಟು ಹಣ ವಾಪಸ್ಸಾಗಲಿದ್ದು ಹಣ ವರ್ಗಾವಣೆಯಾದ ನಂತರ ಪ್ರಯಾಣಿಕರಿಗೆ ಈ ಕುರಿತು ಮಾಹಿತಿ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com