ಅಂತಾರಾಷ್ಟ್ರಿಯ ಯೋಗ ದಿನದಂದು 'ಓಂ' ಕಡ್ಡಾಯವಲ್ಲ: ಕೇಂದ್ರ

ತೀವ್ರ ವಿವಾದದ ನಂತರ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಅಂತಾರಾಷ್ಟ್ರಿಯ ಯೋಗ ದಿನದಂದು ಯೋಗ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ತೀವ್ರ ವಿವಾದದ ನಂತರ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಅಂತಾರಾಷ್ಟ್ರಿಯ ಯೋಗ ದಿನದಂದು ಯೋಗ ಆರಂಭಿಸುವ ಮುನ್ನ 'ಓಂ' ಅಥವಾ ಇತರೆ ಯಾವದೇ ವೈದಿಕ ಮಂತ್ರ ಹೇಳುವುದು ಕಡ್ಡಾಯವಲ್ಲ. ಆದರೆ ಸ್ವಇಚ್ಛೆಯಿಂದ ಹೇಳಬಹುದಾಗಿದೆ ಎಂದು ಮಂಗಳವಾರ ಸ್ಪಷ್ಟಪಡಿಸಿದೆ.
ಯೋಗ ಮಾಡುವ 45 ನಿಮಿಷಗಳ ಮುಂಚೆ ಓಂ ಮತ್ತು ಕೆಲವು ವೇದಗಳನ್ನು ಹೇಳಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ವರದಿ ಮಾಡಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಯುಶ್ ಸಚಿವಾಲಯ, ಓಂ ಕಡ್ಡಾಯವಲ್ಲ ಎಂದು ಹೇಳಿದೆ.
'ಓಂ' ಯೋಗದ ಅವಿಭಾಜ್ಯ ಅಂಗ. ಆದರೆ ಇದನ್ನು ಹೇಳಲೇ ಬೇಕು ಎಂಬ ಕಡ್ಡಾಯ ನಿಯಮ ಇಲ್ಲ. ಆದರೆ ಮಾಧ್ಯಮಗಳು ಅನಗತ್ಯವಾಗಿ ಯೋಗ ದಿನದ ಬಗ್ಗೆ ವಿವಾದ ಸೃಷ್ಟಿಸುತ್ತಿವೆ ಎಂದು ಆಯುಶ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನಿಲ್ ಕುಮಾರ್ ಜನೆರಿವಾಲ ಅವರು ಹೇಳಿದ್ದಾರೆ.
ಯೋಗ ಮಾಡುವ ಮುನ್ನ ಓಂ ಹೇಳುವುದು ಕಡ್ಡಾಯವಲ್ಲಿ. ಅದು ಸಂಪೂರ್ಣ ಸ್ವಇಚ್ಛೆಗೆ ಬಿಟ್ಟಿದ್ದು. ಓಂ ಹೇಳಲು ಬಯಸದವರು ಮೌನವಾಗಿದ್ದಾರೆ ಯಾರೂ ಅವರನ್ನು ಪ್ರಶ್ನಿಸುವುದಿಲ್ಲ ಎಂದು ಜನೆರಿವಾಲ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com