ಇತಿಹಾಸದಲ್ಲೇ ಮೊದಲ ಬಾರಿಗೆ ವಾಯುಪಡೆ ಮುಖ್ಯಸ್ಥರಿಂದ ತೇಜಸ್ ಯುದ್ಧವಿಮಾನ ಚಾಲನೆ

ಭಾರತೀಯ ವಾಯು ಪಡೆ ಮುಖ್ಯಸ್ಥ ಅರೂಪ್‌ ರಹಾ, ತೇಜಸ್ ಲಘು ಯುದ್ಧ ವಿಮಾನವನ್ನು ಮೇ.17 ರಂದು ಚಾಲನೆ ಮಾಡಲಿದ್ದಾರೆ.
ವಾಯು ಪಡೆ ಮುಖ್ಯಸ್ಥ, ಅನೂಪ್ ರಹಾ
ವಾಯು ಪಡೆ ಮುಖ್ಯಸ್ಥ, ಅನೂಪ್ ರಹಾ

ಬೆಂಗಳೂರು: ಭಾರತೀಯ ವಾಯು ಪಡೆ ಮುಖ್ಯಸ್ಥ ಅರೂಪ್‌ ರಹಾ, ತೇಜಸ್ ಲಘು ಯುದ್ಧ ವಿಮಾನವನ್ನು ಮೇ.17 ರಂದು ಚಾಲನೆ ಮಾಡಲಿದ್ದಾರೆ.

ಬೆಂಗಳೂರಿಗೆ ಆಗಮಿಸಲಿರುವ ವಾಯು ಪಡೆ ಮುಖ್ಯಸ್ಥ ಅರೂಪ್‌ ರಹಾ, ಹೆಚ್ಎಎಲ್ ಸಹಯೋಗದಲ್ಲಿ ನಿರ್ಮಿಸಲಾಗಿರುವ ಸಂಪೂರ್ಣ ದೇಶಿ ನಿರ್ಮಿತ ಲಘು ಯುದ್ಧ ವಿಮಾನವನ್ನು ಚಾಲನೆ ಮಾಡಲಿದ್ದಾರೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ವಾಯು ಪಡೆಯ ಮುಖ್ಯಸ್ಥರೊಬ್ಬರು ಸ್ವತಃ ಲಘು ವಿಮಾನವನ್ನು ಚಾಲನೆ ಮಾಡಲಿರುವುದು ವಿಶೇಷ.

ಬೆಂಗಳೂರಿನ ತಮ್ಮ ಭೇಟಿಯಲ್ಲಿ ವಾಯುಪಡೆಯ ಮುಖ್ಯಸ್ಥರು ಪೇಂಟ್ ಹ್ಯಾಂಗರ್ ನ್ನು ಉದ್ಘಾಟನೆ ಮಾಡಲಿದ್ದು ವಿಮಾನ ಉತ್ಪಾದನಾ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ. ಈ ಹಿಂದೆ ವಾಯುಪಡೆಯ ಉಪ ಮುಖ್ಯಸ್ಥರಾಗಿದ್ದ ಏರ್ ಮಾರ್ಷಲ್ ಎಸ್ ಬಿಪಿ ಸಿಂಗ್ 2014 ರ ಸೆಪ್ಟೆಂಬರ್ ನಲ್ಲಿ ತೇಜಸ್ ಯುದ್ಧ ವಿಮಾನವನ್ನು ಚಾಲನೆ ಮಾಡಿದ್ದರು. ಹೆಚ್ಎಎಲ್ ನಿಂದ ನಿರ್ಮಾಣಗೊಂಡಿರುವ ತೇಜಸ್ ಲಘು ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳಿಸಿಕೊಳ್ಳಲಾಗುತ್ತಿದ್ದು ವಾಯುಪಡೆ 120 ತೇಜಸ್ ಯುದ್ಧ ವಿಮಾನಗಳನ್ನು ಖರೀದಿಸಲಿದೆ. ಮೊದಲ ಹಂತದಲ್ಲಿ ನಾಲ್ಕು ತೇಜಸ್ ಯುದ್ಧ ವಿಮಾನಗಳನ್ನುಳ್ಳ ತುಕಡಿಯನ್ನು ಸಿದ್ಧಪಡಿಸಲಾಗುತ್ತದೆ. ಈ ವರ್ಷದಲ್ಲಿ ವಾಯು ಪಡೆಗಾಗಿ ಒಟ್ಟು 6 ಲಘು ಯುದ್ಧ ವಿಮಾನಗಳನ್ನು ತಯಾರು ಮಾಡಲಾಗುತ್ತದೆ. 

ತೇಜಸ್ ಲಘು ಯುದ್ಧ ವಿಮಾನ ಪರೀಕ್ಷೆ ಬಹುತೇಕ ಯಶಸ್ವಿಯಾಗಿರುವುದರಿಂದ ಈಗ ಹೊರದೇಶಗಳಿಂದಲೂ ಬೇಡಿಕೆ ಹೆಚ್ಚಿದ್ದು, ತೇಜಸ್ ಯುದ್ಧ ವಿಮಾನಗಳನ್ನು ರಫ್ತು ಮಾಡುವುದಕ್ಕೂ ಭಾರತ ಉತ್ಸುಕವಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಇತ್ತೀಚೆಗೆ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com