ಭಾರತ-ಬಾಂಗ್ಲಾ ರೈಲು ಸಂಪರ್ಕ ಯೋಜನೆಗೆ ಶಿಲಾನ್ಯಾಸ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ

ಭಾರತ- ಬಾಂಗ್ಲಾ ನಡುವೆ ಹೊಸ ರೈಲು ಸಂಪರ್ಕ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮೇ.27 ರಂದು ಶಿಲಾನ್ಯಾಸ ನೆರವೇರಿಸುವ ಸಾಧ್ಯತೆ ಇದೆ
ನರೇಂದ್ರ ಮೋದಿ
ನರೇಂದ್ರ ಮೋದಿ

ಅಗರ್ತಲಾ: ಭಾರತ- ಬಾಂಗ್ಲಾ ನಡುವೆ ಹೊಸ ರೈಲು ಸಂಪರ್ಕ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮೇ.27 ರಂದು ಶಿಲಾನ್ಯಾಸ ನೆರವೇರಿಸುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆಯ ಉನ್ನತ ಅಧಿಕಾರಿ ಮಾಹಿತಿ ನೀಡಿದ್ದಾರೆ.
ತ್ರಿಪುರ ರಾಜ್ಯದ ಅಗರ್ತಲಾ- ಸೇಲ್ಡಹ್, ಅಗರ್ತಲಾ- ಸಿಲ್ಚಾರ್ ನಡುವೆ ದಿನನಿತ್ಯ ಸಂಚರಿಸಲಿರುವ ಪ್ಯಾಸೆಂಜರ್ ರೈಳಿಗೆ ಮೇ.27 ರಂದು ಪ್ರಧಾನಿ ನರೇಂದ್ರ ಚಾಲನೆ ನೀಡಲಿದ್ದಾರೆ. ಶಿಲ್ಲಾಂಗ್ ನಲ್ಲಿ ನಡೆಯಲಿರುವ ಈಶಾನ್ಯ ಪರಿಷತ್ ಸರ್ವಸದಸ್ಯರ ಅಧಿವೇಶನದಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ರಿಮೋಟ್ ಕಂಟ್ರೋಲ್ ಮೂಲಕ ಭಾರತದ ಅಗರ್ತಲಾ ದಿಂದ ಬಾಂಗ್ಲಾ ದೇಶದ ಅಖೌರಗೆ ಸಂಪರ್ಕ ಕಲ್ಪಿಸುವ ರೈಲು ಯೋಜನೆಗೆ ಶಿಲಾನ್ಯಾಸ ನೆರವೇರಿಸುವ ಸಾಧತೆ ಇದೆ ಎಂದು ಈಶಾನ್ಯ ಗಡಿನಾಡಿನ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸುಮಾರು 968 ಕೋಟಿ ಮೊತ್ತದ ಅಗರ್ತಲಾ- ಅಖೌರ ರೈಲು ಯೋಜನೆ ಒಪ್ಪಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್- ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಭೇಟಿಯ ವೇಳೆ ಅಂತಿಮವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com