ಪತ್ರ ಮೂಲಕ ಪತ್ನಿಗೆ ವಿಚ್ಛೇದನ; ತಲಾಖ್ ಪದ್ಧತಿ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮಹಿಳೆ ಮೊರೆ

ಮುಸಲ್ಮಾನರಲ್ಲಿ ವಿಚ್ಛೇದನ ಪಡೆದುಕೊಳ್ಳಲು ಚಾಲ್ತಿಯಲ್ಲಿರುವ ತಲಾಖ್ ಪದ್ಧತಿಯನ್ನು ರದ್ದುಪಡಿಸುವಂತೆ...
ಅಫ್ರೀನ್ ರೆಹಮಾನ್
ಅಫ್ರೀನ್ ರೆಹಮಾನ್

ಜೈಪುರ: ಮುಸಲ್ಮಾನರಲ್ಲಿ ವಿಚ್ಛೇದನ ಪಡೆದುಕೊಳ್ಳಲು ಚಾಲ್ತಿಯಲ್ಲಿರುವ ತಲಾಖ್ ಪದ್ಧತಿಯನ್ನು ರದ್ದುಪಡಿಸುವಂತೆ ಕೋರಿ ಜೈಪುರದಲ್ಲಿ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಜೈಪುರದ 25 ವರ್ಷದ ನಿವಾಸಿ ಅಫ್ರೀನ್ ರೆಹಮಾನ್ ಮುಸಲ್ಮಾನರಲ್ಲಿ ಮೂರು ಬಾರಿ ತಲಾಖ್ ಎಂದು ಹೇಳಿದರೆ ವಿಚ್ಚೇದನ ನೀಡುವ ಪದ್ಧತಿಗೆ ಬಲಿಪಶುವಾಗಿದ್ದು, ಅಂಚೆ ಮೂಲಕ ವಿಚ್ಛೇದನ ಪತ್ರ ಸಿಕ್ಕಿದ ಬಳಿಕ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿದ್ದಾರೆ.

ಅರ್ಜಿಯಲ್ಲಿ ರೆಹಮಾನ್, ವೈವಾಹಿಕ ಪೋರ್ಟಲ್ ಮೂಲಕ ನನಗೆ 2014ರಲ್ಲಿ ವಿವಾಹವಾಯಿತು. ಮದುವೆಯಾಗಿ ಎರಡು-ಮೂರು ತಿಂಗಳುಗಳು ಕಳೆದ ನಂತರ ಅತ್ತೆ-ಮಾವ ನನಗೆ ಮಾನಸಿಕವಾಗಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ನನ್ನನ್ನು ಹೊಡೆದು, ಬಡಿದು ಮನೆ ತೊರೆಯುವಂತೆ ಹೇಳಿದರು. ನಾನು ನನ್ನ ತಾಯಿ ಮನೆಗೆ ಬಂದೆ. ಈಗ ವಿಚ್ಛೇದನ ಎಂದು ಹೇಳಿ ನನಗೆ ಗಂಡನ ಮನೆಯವರು ಪತ್ರ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.

 ''ನನಗೆ ಅನ್ಯಾಯವಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಅಖಿಲ ಭಾರತ ಮುಸ್ಲಿಂ ಮಹಿಳೆಯರ ಖಾಸಗಿ ಕಾನೂನು ಮಂಡಳಿ ಅಧ್ಯಕ್ಷೆ ಶೈಸ್ತ ಅಂಬರ್, ಮೂರು ಬಾರಿ ತಲಾಖ್ ಹೇಳುವ ಪದ್ಧತಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.
 
ತಲಾಖ್ ಎಂದರೆ ಮುಸಲ್ಮಾನರಲ್ಲಿ ಗಂಡ ಹೆಂಡತಿಗೆ ನಾನು ನಿನಗೆ ವಿಚ್ಛೇದನ ನೀಡುತ್ತೇನೆ ಎಂದು ಹೇಳುವುದಾಗಿದೆ. ಮುಸಲ್ಮಾನ ಸಮುದಾಯದಲ್ಲಿರುವ ಈ ಪದ್ಧತಿಯಂತೆ ಗಂಡ ಮೂರು ಬಾರಿ ತಲಾಖ್ ಎಂದರೆ ವಿಚ್ಛೇದನವಾಗುತ್ತದೆ. ತಲಾಖ್ ಪದ್ಧತಿ ವಿಚಾರದಲ್ಲಿ  ಶಿಯಾ ಮತ್ತು ಸುನ್ನಿ ಮುಸಲ್ಮಾನರಲ್ಲಿ ಬೇರೆ ಬೇರೆ ವಿಧಾನಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com