ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕಡಿಮೆಯಾಗಿ ಎರಡು ದಿನಗಳಿಂದ ತಮಿಳ್ನಾಡಿನಲ್ಲಿ ಭಾರೀ ಮಳೆಗೆ ಕಾರಣವಾಗಿದ್ದ ಚಂಡಮಾರುತವೀಗ ಆಂಧ್ರ -ಒಡಿಶಾ ಕರಾವಳಿ ಭಾಗದತ್ತ ಸಾಗಿದೆ.
ಚೆನ್ನೈ ಮತ್ತು ತಮಿಳ್ನಾಡಿನ ಉತ್ತರ ಭಾಗದಲ್ಲಿ ಗುರುವಾರದ ವರೆಗೆ ಮಾತ್ರ ಮಳೆ ಸುರಿದು ಮತ್ತೆ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂಬರುವ ದಿನಗಳಲ್ಲಿ ಆಂಧ್ರ ಪ್ರದೇಶದಲ್ಲಿ ಭಾರೀ ಮಳೆಯಾಗಲಿದ್ದು, ಬರಗಾಲದಿಂದ ಕಂಗೆಟ್ಟಿರುವ ಜನರಿಗೆ ಇದು ಸಮಾಧಾನ ತರಲಿದೆ.
ಬುಧವಾರ ಸುಮಾರು 80 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಚಂಡಮಾರುತವು ಆಂಧ್ರದತ್ತ ಸಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಕಳೆದ ಮೂರು ದಿನಗಳಲ್ಲಿ ತಮಿಳ್ನಾಡಿನಲ್ಲಿ 15 ಸೆಮಿ ಮಳೆಯಾಗಿತ್ತು.