ಸ್ವದೇಶಿ ನಿರ್ಮಿತ ಪೃಥ್ವಿ-2 ಕ್ಷಿಪಣಿ ಯಶಸ್ವಿ ಉಡಾವಣೆ

ಸ್ವದೇಶಿ ನಿರ್ಮಿತ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಖಂಡಾಂತರ ಪೃಥ್ವಿ-2 ಕ್ಷಿಪಣಿಯನ್ನು ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ...
ಪೃಥ್ವಿ-2
ಪೃಥ್ವಿ-2

ಬಾಲಸೋರೆ(ಒಡಿಶಾ): ಸ್ವದೇಶಿ ನಿರ್ಮಿತ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಖಂಡಾಂತರ ಪೃಥ್ವಿ-2 ಕ್ಷಿಪಣಿಯನ್ನು ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಒಡಿಶಾದ ಚಾಂಡಿಪುರದಲ್ಲಿರುವ ಸೇನಾ ನೆಲೆಯಲ್ಲಿ ಬೆಳಗ್ಗೆ 9.40ರ ಸುಮಾರಿಗೆ ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲಾಗಿದ್ದು, ನಿಗದಿತ ಗುರಿಯನ್ನು ನಿರ್ಧಿಷ್ಟ ಸಮಯದಲ್ಲಿ ತಲುಪುವ  ಮೂಲಕ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ.  ಕ್ಷಿಪಣಿ ಗುರಿ ತಲುಪಿದ್ದನ್ನು ಭಾರತೀಯ ರಾಡಾರ್‌ಗಳು ಪತ್ತೆ ಮಾಡಿದ್ದು, ವಿಜ್ಞಾನಿಗಳಲ್ಲಿ ಹರ್ಷ ಮೂಡಿಸಿದೆ.

ಪೃಥ್ವಿ-2 ಸಂಪೂರ್ಣ ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿದ್ದು, 350 ಕಿಮೀ ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿದೆ. ಈ ಕ್ಷಿಪಣಿಯನ್ನು ಕರಾವಳಿ ಭದ್ರತೆಗಾಗಿ ಸಂಶೋಧಿಸಲಾಗಿತ್ತು. ಶತ್ರು ಪಾಳಯದ  ನೌಕೆಗಳನ್ನು ಕ್ಷಣಮಾತ್ರದಲ್ಲಿ ಉಡಾಯಿಸಬಲ್ಲ ಸಾಮರ್ಥ್ಯ ಪೃಥ್ವಿ-2 ಕ್ಷಿಪಣಿಗಿದೆ. ಸುಮಾರು 500ರಿಂದ 1 ಸಾವಿರ ಕೆಜಿ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಪೃಥ್ವಿ-2 ಕ್ಷಿಪಣಿಗಿದ್ದು, ಧ್ರವ  ಇಂಧನವನ್ನು ಸ್ರವಿಸುವ ಅವಳಿ ಇಂಜಿನ್ ಗಳನ್ನು ಕ್ಷಿಪಣಿ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com