ಅಕ್ಬರ್ ರೋಡ್ ಹೆಸರನ್ನು ಬದಲಾಯಿಸುವುದು ನಮ್ಮ ಅಜೆಂಡಾದಲ್ಲಿಲ್ಲ: ವೆಂಕಯ್ಯ ನಾಯ್ಡು

ನವದೆಹಲಿಯ ಅಕ್ಬರ್ ರಸ್ತೆಯ ಹೆಸರನ್ನು ರಜಪೂತ ರಾಜ ಮಹಾರಾಣಾ ಪ್ರತಾಪ್ ಎಂದು ಬದಲಿಸಬೇಕು ಎಂಬ ಮನವಿಯನ್ನು ಕೇಂದ್ರ ಸಂಸದೀಯ ವ್ಯವಹಾರ...
ಎಂ ವೆಂಕಯ್ಯ ನಾಯ್ಡು
ಎಂ ವೆಂಕಯ್ಯ ನಾಯ್ಡು
ನವದೆಹಲಿ:  ನವದೆಹಲಿಯ ಅಕ್ಬರ್ ರಸ್ತೆಯ ಹೆಸರನ್ನು ರಜಪೂತ ರಾಜ ಮಹಾರಾಣಾ ಪ್ರತಾಪ್ ಎಂದು ಬದಲಿಸಬೇಕು ಎಂಬ ಮನವಿಯನ್ನು  ಕೇಂದ್ರ ಸಂಸದೀಯ ವ್ಯವಹಾರ ಖಾತೆಗಳ ಸಚಿವ ಎಂ ವೆಂಕಯ್ಯ ನಾಯ್ಡು ಬುಧವಾರ ತಿರಸ್ಕರಿಸಿದ್ದಾರೆ. 
ರಸ್ತೆಯ ಹೆಸರು ಬದಲಾಯಿಸುವುದರ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಾಯ್ಡು ಅವರು, ಈ ವಿಷಯಗಳು ನನ್ನ ಅಜೆಂಡಾದಲ್ಲಿಲ್ಲ. ನಾನು ಅಭಿವೃದ್ಧಿಯ ಬಗ್ಗೆ ಮಾತ್ರ ಕಾರ್ಯೋನ್ಮುಖನಾಗಿದ್ದೇನೆ ಎಂದು ಹೇಳಿದ್ದಾರೆ.
ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ವಿಕೆ ಸಿಂಗ್ ಅವರು ಅಕ್ಬರ್ ರಸ್ತೆಯ ಹೆಸರನ್ನು ಬದಲಾಯಿಸಬೇಕೆಂದು ನಾಯ್ಡು  ಅವರಿಗೆ ಪತ್ರ ಬರೆದಿದ್ದು, ಇದಕ್ಕೆ ನಾಯ್ಡು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್‌ನಿಂದ ವಿರೋಧ: ಅಕ್ಬರ್ ರಸ್ತೆಯ ಹೆಸರು ಬದಲಾಯಿಸುವುದಕ್ಕೆ ಕಾಂಗ್ರೆಸ್ ಪಕ್ಷ ತೀವ್ರ ವಿರೋಧ ವ್ಯಕ್ತ ಪಡಿಸಿದೆ.  ಬಿಜೆಪಿ ಸರ್ಕಾರ ತಮ್ಮ ಅಧಿಕಾರದಲ್ಲಿನ ವೈಫಲ್ಯಗಳ ಬಗ್ಗೆ ಜನರ ಗಮನವನ್ನು ಬೇರೆಡೆ ತಿರುಗಿಸುವುದಕ್ಕಾಗಿಯೇ ಕೇಂದ್ರ ಸರ್ಕಾರ ಅಕ್ಬರ್ ರಸ್ತೆಯನ್ನು ಮಹಾರಾಣಾ ಪ್ರತಾಪ್ ರಸ್ತೆ  ಎಂದು ಮರುನಾಮಕರಣ ಮಾಡಲು ಹೊರಟಿದೆ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com