ದಲಿತರೊಂದಿಗೆ ದೇವಾಲಯ ಪ್ರವೇಶ: ಹಲ್ಲೆಗೊಳಗಾದ ಸಂಸದ ತರುಣ್ ವಿಜಯ್ ರನ್ನು ಭೇಟಿ ಮಾಡಿದ ರಾವತ್

ದಲಿತ ಮುಖಂಡರೊಂದಿಗೆ ದೇವಾಲಯ ಪ್ರವೇಶಿಸಿದಕ್ಕೆ ಹಲ್ಲೆಗೊಳಗಾಗಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಅವರನ್ನು ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಭೇಟಿ ಮಾಡಿದ್ದಾರೆ.
ಹರೀಶ್ ರಾವತ್
ಹರೀಶ್ ರಾವತ್

ಡೆಹ್ರಾಡೂನ್: ದಲಿತ ಮುಖಂಡರೊಂದಿಗೆ ದೇವಾಲಯ ಪ್ರವೇಶಿಸಿದಕ್ಕೆ ಹಲ್ಲೆಗೊಳಗಾಗಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಅವರನ್ನು ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಭೇಟಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಹರೀಶ್ ರಾವತ್, ತರುಣ್ ವಿಜಯ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆಗಾಗಿ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದೆ ಎಂದು ವೈದ್ಯರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ. ತರುಣ್ ವಿಜಯ್ ಅವರಿಗೆ ಚಿಕಿತ್ಸೆ ನೀಡಲು ತಜ್ಞರು ಅಗತ್ಯವಿದ್ದಲ್ಲಿ ಅಥವಾ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಹೊರ ರಾಜ್ಯಕ್ಕೆ ಕಲಿಸುವುದಕ್ಕೆ ಎಲ್ಲಾ ರೀತಿಯ ನೆರವು ನೀಡಲು ಉತ್ತರಾಖಂಡ್ ಸರ್ಕಾರ ಸಿದ್ಧವಿದೆ. ಆದರೆ ತರುಣ್ ವಿಜಯ್ ಇಲ್ಲಿ ನೀಡಲಾಗುತ್ತಿರುವ ಚಿಕಿತ್ಸೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹರೀಶ್ ರಾವತ್ ತಿಳಿಸಿದ್ದಾರೆ.

ಘಟನೆಯನ್ನು ಖಂಡಿಸಿರುವ ಸಿಎಂ, ದಲಿತರು ದೇವಾಲಯ ಪ್ರವೇಶ ಮಾಡುವ ವಿಚಾರಕ್ಕೆ  21 ನೇ ಶತಮಾನದಲ್ಲಿಯೂ ಹಲ್ಲೆ ನಡೆಯುತ್ತಿರುವುದು ವಿಷಾದನೀಯ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ದೇವರು ಎಲ್ಲರಿಗೂ ಸೇರಿದವನು, ದೇವಾಲಯ ಪ್ರವೇಶಿಸದಂತೆ ಯಾರನ್ನೂ ತಡೆಯುವುದು ಸರಿಯಲ್ಲ ಎಂದು ಹೇಳಿದ್ದಾರೆ.
ದಲಿತರು ಸೇರಿದಂತೆ ಎಲ್ಲರಿಗೂ ದೇವಾಲಯ ಪ್ರವೇಶ ನೀಡುವುದಕ್ಕೆ ಅವಕಾಶ ನೀಡಬೇಕೆಂದು ರಾವತ್ ಧಾರ್ಮಿಕ ಮುಖಂಡರಿಗೆ ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com