ಇಲ್ಲಿ ಬಿಸಿಲು ಎಷ್ಟಿದೆ ಎಂದರೆ, ಯೋಧರು ಕಾದ ಮರಳಿನ ಮೇಲೆ ಅಡುಗೆ ಮಾಡುತ್ತಾರೆ!

ಭಾರತ- ಪಾಕಿಸ್ತಾನ ಗಡಿ ಭಾಗದಲ್ಲಿರುವ ಜೈಸಲ್ಮೀರ್ ನಲ್ಲಿ ತಾಪಮಾನ 50 ಡಿಗ್ರಿ ದಾಟಿದ್ದು, ಗಡಿ ಪ್ರದೇಶದಲ್ಲಿರುವ ಯೋಧರು ಹಪ್ಪಳವನ್ನು ಬಿಸಿ ಮರಳಿನ ಮೇಲೆ ಇಟ್ಟು ಹುರಿಯುತ್ತಾರೆ.
ಇಲ್ಲಿ ಬಿಸಿಲು ಎಷ್ಟಿದೆ ಎಂದರೆ, ಯೋಧರು ಬಿಸಿ ಮರಳಿನ ಮೇಲೆ ಅಡುಗೆ ಮಾಡುತ್ತಾರೆ!
ಇಲ್ಲಿ ಬಿಸಿಲು ಎಷ್ಟಿದೆ ಎಂದರೆ, ಯೋಧರು ಬಿಸಿ ಮರಳಿನ ಮೇಲೆ ಅಡುಗೆ ಮಾಡುತ್ತಾರೆ!

ಜೈಸಲ್ಮೀರ್:ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಜೈಸಲ್ಮೀರ್ ನಲ್ಲಿ ತಾಪಮಾನ 50 ಡಿಗ್ರಿ ದಾಟಿದ್ದು, ಯೋಧರು ಕಾದ ಮರಳಿನ ಮೇಲೆ ಹಪ್ಪಳವನ್ನು ಸುಡುತ್ತಾರೆ. 

ಇನ್ನು ಅಕ್ಕಿಯನ್ನು ಮರಳಿನ ಮೇಲಿಟ್ಟರೆ ಮೂರು ಗಂಟೆಗಳಲ್ಲಿ ಅನ್ನ ಸಿದ್ಧವಾಗಿರುತ್ತದೆ. ಉಷ್ಣಾಂಶ ಮಾಪನ ಮಾಡಲು ಸಾಧನವನ್ನು ಹೊಂದಿದ್ದು ಗರಿಷ್ಟ ತಾಪಮಾನ 55 ಡಿಗ್ರಿ ದಾಖಲಾಗಿದೆ. ಆದರೆ ಹವಾಮಾನ ಇಲಾಖೆ ದಾಖಲೆಗಳ ಪ್ರಕಾರ ಈ ವರೆಗೂ ದಾಖಲಾಗಿರುವ ಗರಿಷ್ಟ ಉಷ್ಣಾಂಶ 50 ಡಿಗ್ರಿಯಾಗಿದ್ದು ಶುಕ್ರವಾರ 47 .6 ಡಿಗ್ರಿಯಷ್ಟಿತ್ತು. ಇನ್ನು ಖಾಸಗಿ ಸಂಸ್ಥೆಗಳ ಉಷ್ಣಾಂಶ ಮಾಪಕ ಸಾಧನಗಳಲ್ಲಿ 54 .5 ಡಿಗ್ರಿ ಉಷ್ಣಾಂಶ ದಾಖಲಾಗಿದೆ.  

ಜೈಸಲ್ಮೀರ್ ಪ್ರದೇಶದಲ್ಲಿ ಉಷ್ಣಾಂಶ ತಡೆಯಲಾರದ ಮಟ್ಟಕ್ಕೆ ಏರಿಕೆಯಾಗಿದ್ದು ಬಿಎಸ್ ಎಫ್ ಯೋಧರು ಬಿಸಲ ಬೇಗೆ ತಡೆಯಲು ಟೋಪಿ, ಕನ್ನಡಕಗಳನ್ನು ಧರಿಸುತ್ತಿದ್ದಾರೆ. ಜೈಸಲ್ಮೀರ್ ಪ್ರದೇಶದಲ್ಲಿ ಮರಳು ಹೆಚ್ಚಿದ್ದು ಮರಳಿನ ಮೇಲೆ ಕಾಲಿಟ್ಟರೆ,  ಬೂಟ್ ಗಳು ಕರಗುವಷ್ಟು ಬಿಸಿ ಇರುತ್ತದೆ, ಇದನ್ನು ತಪ್ಪಿಸಲು ಗಸ್ತು ತಿರುಗುವ ಯೋಧರು ಕೆಮಿಕಲ್ ಗಳನ್ನೂ ಬಳಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com