
ನವದೆಹಲಿ: ಮಕ್ಕಳ ಪಾಸ್ ಪೋರ್ಟ್ ಗೆ ತಾಯಿಯ ಹೆಸರೊಂದಿದ್ದರೇ ಸಾಕು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ತಂದೆ ಇರಲಿ, ಇಲ್ಲದಿರಲಿ, ಆತನ ಹೆಸರನ್ನು ನಮೂದಿಸುವುದು ಕಡ್ಡಾಯ ಎಂಬ ಪಾಸ್ಪೋರ್ಟ್ ನಿಯಮಾವಳಿಯನ್ನು ಶುಕ್ರವಾರ ಊರ್ಜಿತಗೊಳಿಸಿರುವ ನ್ಯಾಯಪೀಠ, ಕಾನೂನಿನ ಪ್ರಕಾರ ಅಗತ್ಯ ಇದ್ದಲ್ಲಿ ಮಾತ್ರ ತಂದೆಯ ಹೆಸರು ನಮೂದಿಸಲು ಒತ್ತಾಯಿಸಬಹುದು. ಕಡ್ಡಾಯದ ವಿಧಿ ಇಲ್ಲದೇ ಇದ್ದಾಗ ಇದು ಅರ್ಜಿದಾರರ ವಿವೇಚನೆಗೆ ಬಿಟ್ಟ ವಿಚಾರ. ತಾಯಿ ಹೆಸರೊಂದು ಇದ್ದರೆ ಅಷ್ಟೇ ಸಾಕು ಎಂದು ಹೇಳಿದೆ.
ಸಿಂಗಲ್ ಪೇರೆಂಟ್ ಆಗಿರುವ ಮಗುವಿನ ಪಾಸ್ಪೋರ್ಟ್ ಅರ್ಜಿಯೊಂದನ್ನು ಮಾನ್ಯ ಮಾಡಿ ಎಂದು ಕಳೆದ ವಾರವಷ್ಟೇ ನ್ಯಾಯಮೂರ್ತಿ ಮನಮೋಹನ್ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಗೆ ನಿರ್ದೇಶನ ನೀಡಿದ್ದರು.
ಕಾಲ ಬದಲಾದಂತೆ ವಿವಾಹ ಪ್ರಕ್ರಿಯೆ ಇಲ್ಲದೆ ಮಗುವನ್ನು ಪಡೆದ ತಾಯಂದಿರು, ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.ಮಾತ್ರವಲ್ಲ, ಪತಿಯಿಂದ ಪರಿತ್ಯಕ್ತರಾದವರು, ಅತ್ಯಾಚಾರಕ್ಕೆ ಒಳಗಾದವರು, ಐವಿಎಫ್ ತಂತ್ರಜ್ಞಾನದಿಂದ ಸಂತಾನ ಪಡೆದವರು ಪಾಸ್ಪೋರ್ಟ್ ಮಾಡಿಸುವ ಸಂದರ್ಭ ಮುಜುಗರಕ್ಕೆ ಒಳಗಾಗುವ ಪ್ರಸಂಗ ಇತ್ತೀಚಿನ ದಿನಗಳಲ್ಲಿ ಎದುರಾಗಿದೆ.
Advertisement