ಬುದ್ಧ ಪೂರ್ಣಿಮೆ: ರಾಷ್ಟ್ರಪತಿ ಪ್ರಣಬ್, ಪ್ರಧಾನಿ ಮೋದಿ ಶುಭಾಶಯ

ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದೆನಿಸಿರುವ ಬುದ್ಧ ಪೂರ್ಣಿಮಾ ಶನಿವಾರ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ...
ಪ್ರಣಬ್ ಮುಖರ್ಜಿ-ನರೇಂದ್ರ ಮೋದಿ
ಪ್ರಣಬ್ ಮುಖರ್ಜಿ-ನರೇಂದ್ರ ಮೋದಿ
ನವದೆಹಲಿ: ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದೆನಿಸಿರುವ ಬುದ್ಧ ಪೂರ್ಣಿಮಾ ಶನಿವಾರ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಬುದ್ಧ ಪೂರ್ಣಿಮಾಗೆ ಶುಭ ಕೋರಿದ್ದಾರೆ. 
ಶತ ಶತಮಾನಗಳಿಂದಲೂ ಭಗವಾನ್ ಬುದ್ಧನ ಬೋದನೆಗಳು ಮಿಲಿಯನ್ ಗಟ್ಟಲೇ ಜನರ ಮೇಲೆ ಪರಿಣಾಮ ಬೀರಿದೆ. ಜ್ಞಾನದ ಸಾಕಾರರೂಪವಾಗಿದ್ದ ಬುದ್ಧ ಶಾಂತಿ ಮತ್ತು ಸಹಾನುಭೂತಿ ಹೊಂದಿದ್ದರು ಎಂದು ಮೋದಿ ಹೇಳಿದ್ದಾರೆ. 
ಬುದ್ಧನ ಬೋದನೆಗಳು ಸಮಾಜವನ್ನು ಶಾಂತಿಯಿಂದಿರಸಲು ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ ಎಂದಿದ್ದಾರೆ. 
ಇನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದೇಶದ ಜನತೆಗೆ ಬುದ್ಧ ಪೂರ್ಣಿಮಾದ ಶುಭಾಷಯ ಕೋರಿದ್ದಾರೆ. ಪ್ರೀತಿ, ಸಹಾನುಭೂತಿ, ಅಹಿಂಸೆ ಮತ್ತು ಸಮಾನತೆ ಬುದ್ಧ ನೀಡಿದ ಸಂದೇಶ. ಇದನ್ನು ಎಲ್ಲರೂ ಪಾಲಿಸಬೇಕು. ಇದು ಶಾಶ್ವತ ಬೆಳಕಿನ ಸಂಕೇತ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com