ಜಮ್ಮು-ಕಾಶ್ಮೀರದಲ್ಲಿ ಗರಿಷ್ಠ ತಾಪಮಾನ ದಾಖಲು!

ಅತ್ಯಂತ ಕಡಿಮೆ ತಾಪಮಾನ ಹೊಂದಿರುವ ಕಾಶ್ಮೀರದಲ್ಲಿ ಮೇ.21 ರಂದು ಅತ್ಯಂತ ಹೆಚ್ಚಿನ ತಾಪಮಾನ ದಾಖಲಾಗಿದೆ.
ಜಮ್ಮು-ಕಾಶ್ಮೀರ
ಜಮ್ಮು-ಕಾಶ್ಮೀರ

ಶ್ರೀನಗರ: ಕಡಿಮೆ ತಾಪಮಾನ ಹೊಂದಿರುವ ಜಮ್ಮು-ಕಾಶ್ಮೀರದಲ್ಲಿ ಮೇ.21 ರಂದು ಅತ್ಯಂತ ಹೆಚ್ಚಿನ ತಾಪಮಾನ ದಾಖಲಾಗಿದೆ.

ಹವಾಮಾನ ಇಲಾಖೆ ವರದಿಯ ಪ್ರಕಾರ ಜಮ್ಮು ಪ್ರದೇಶದಲ್ಲಿ ಮೇ.21 ರಂದು 41.7 ಡಿಗ್ರಿ ತಾಪಮಾನ ದಾಖಲಾಗಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ 4 ಡಿಗ್ರಿ ಹೆಚ್ಚಿನ ತಾಪಮಾನವಾಗಿದ್ದು ಈ ಋತುವಿನಲ್ಲಿ ದಾಖಲಾದ ಗರಿಷ್ಠ ತಾಪಮಾನ ಎಂದು ಹೇಳಲಾಗಿದೆ. ಇನ್ನು ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ 31.9 ಡಿಗ್ರಿ ತಾಪಮಾನ ದಾಖಲಾಗಿದ್ದು ಎಂದಿಗಿಂತ 7 ಡಿಗ್ರಿ ಏರಿಕೆಯಾಗಿದ್ದು ಇನ್ನೂ ಕೆಲವು ದಿನಗಳು ಇದೇ ರೀತಿಯ ಹವಾಮಾನ ಇರಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com