
ನವದೆಹಲಿ: ಎನ್ಡಿಎ ಸರ್ಕಾರದ ದ್ವಿತೀಯ ವಾರ್ಷಿಕ ಸಾಧನಾ ಸಮಾವೇಶ ಸಂಭ್ರಮ ಇಂಡಿಯಾ ಗೇಟ್ ಆವರಣದಲ್ಲಿ ನಡೆಯಲಿದ್ದು, ಖ್ಯಾತ ಬಾಲಿವುಡ್ ನಟ, ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ಮತ್ತು ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿರುವ ಸಚಿವರು ಈ ಸಂದರ್ಭದಲ್ಲಿ ಸರ್ಕಾರದ ಸಾಧನೆ, ನೂತನ ಯೋಜನೆ, ಮುಂದಿನ ಗುರಿ ಇತ್ಯಾದಿ ಬಗ್ಗೆ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಚ್ಚನ್ ಅವರಿಗೆ ಮೋದಿ ಈಗಾಗಲೇ ಅಧಿಕೃತ ಆಹ್ವಾನ ನೀಡಿದ್ದಾರೆ. ಮೋದಿ ಸಂಪುಟದ ಎಲ್ಲಾ ಸಚಿವರು ಸಮಾರಂಭದಲ್ಲಿ ಹಾಜರಾಗಲಿದ್ದಾರೆ.
ಸಂಜೆ 5 ರಿಂದ ರಾತ್ರಿ 10 ರ ವರೆಗೆ 5 ತಾಸು ನಡೆಯುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೂರದರ್ಶನದ ನೇರ ಪ್ರಸಾರ ಮಾಡಲಿದೆ.ದೇಶ್ ಬದಲ್ ರಹಾ ಹೈ ’ ಎಂಬುದು ಇಡೀ ಕಾರ್ಯಕ್ರಮದ ಥೀಮ್ ಸಾಂಗ್ ಆಗಿ ಹೊಮ್ಮಲಿದೆ. ಇದಕ್ಕಾಗಿ ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಜತೆ ಬಚ್ಚನ್ ಉಪಸ್ಥಿತಿ ವಿಶೇಷ ತಾರಾ ಮೆರುಗು ನೀಡಲಿದೆ.
Advertisement